ಬೆಂಗಳೂರು: “ಮಹಿಳಾ ಸುರಕ್ಷತೆ: ಸಾಮೂಹಿಕ ಜವಾಬ್ದಾರಿ” ಎಂಬ ಘೋಷಣೆಯಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆಸುತ್ತಿರುವ ಎರಡು ತಿಂಗಳ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ನವೆಂಬರ್ 10ರಂದು ರಾಷ್ಟ್ರ ವ್ಯಾಪಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.
ಆ ಪ್ರಯುಕ್ತ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಕೆಂಪು ಪಟ್ಟಿ ಬಾಯಿಗೆ ಕಟ್ಟಿ ಸಾರ್ವಜನಿಕ ಸ್ಥಳಗಳಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಸಬಲೀಕರಣವೇ ದೇಶದ ಸಬಲೀಕರಣ, ಸುರಕ್ಷಿತ ರಾಷ್ಟ್ರದ ಮುನ್ನುಡಿ ಸುರಕ್ಷಿತ ಮಹಿಳೆಯರಿಂದಾಗಿದೆ, ಆಲಿಸಿ ಆಲಿಸಿ ನಮ್ಮ ಧ್ವನಿಗಳನ್ನು ಆಲಿಸಿ, ಗೌರವಿಸಿ ಗೌರವಿಸಿ ನಮ್ಮ ಆಯ್ಕೆಗಳನ್ನು ಗೌರವಿಸಿ ಎಂಬಿತ್ಯಾದಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.. ಈ ಸಂದರ್ಭದಲ್ಲಿ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ಹಾಗೂ ಅಸೆಂಬ್ಲಿ ಸಮಿತಿ ನಾಯಕಿಯರು ಪಾಲ್ಗೊಂಡಿದ್ದರು.
ಮಂಗಳೂರು ನಗರದ ವಿವಿಧ ಕಡೆ ಮೌನ ಪ್ರತಿಭಟನೆ
ಮಂಗಳೂರು : ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರ ಸಮಿತಿಯು ಹಮ್ಮಿಕೊಂಡಿರುವ “ಮಹಿಳಾ ಸುರಕ್ಷತೆ – ಸಾಮೂಹಿಕ ಜವಾಬ್ದಾರಿ” ಎಂಬ ಅಭಿಯಾನದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ತೊಕ್ಕೊಟ್ಟು ಹಾಗೂ ಮಂಗಳೂರು ನಗರದ ಕುದ್ರೋಳಿ, ಕೃಷ್ಣಾಪುರ ಮತ್ತು ಬಜಪೆಯಲ್ಲಿ ಮೌನ ಪ್ರತಿಭಟನೆ ನಡೆಯಿತು.