ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿಖತ್ ಜರೀನ್‌ಗೆ ಚಿನ್ನದ ಪದಕ

Prasthutha|

ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ 6ನೇ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕೂಟದಲ್ಲಿ ವಿಶ್ವ ಚಾಂಪಿಯನ್‌ ನಿಖತ್‌ ಝರೀನ್‌ ಮತ್ತು ಒಲಿಂಪಿಕ್ಸ್‌ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್‌ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 10 ಪದಕ ಗೆದ್ದ ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ತಂಡ ವಿಭಾಗದಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು.

- Advertisement -

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧಿಕಾರಿಗಳು ವಿಜೇತರಿಗೆ ಪದಕಗಳನ್ನು ಹಸ್ತಾಂತರಿಸಿದರು.

75 ಕೆಜಿ ವಿಭಾಗ

- Advertisement -

75 ಕೆಜಿ ವಿಭಾಗದ ಫೈನಲ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಅಸ್ಸಾಂನ ಬಾಕ್ಸರ್ ಬೊರ್ಗೊಹೈನ್, ಸರ್ವೀಸಸ್‌  ಸ್ಪೋರ್ಟ್ಸ್ ಕಂಟ್ರೋಲ್‌ ಬೋರ್ಡ್‌ನ (ಎಸ್‌ಎಸ್‌ಸಿಬಿ) ಅರುಂಧತಿ ಚೌಧರಿ ವಿರುದ್ಧ 5-0 ಅಂತರದಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದರು.

50 ಕೆಜಿ ವಿಭಾಗ

ಹಾಲಿ ವಿಶ್ವಚಾಂಪಿಯನ್​ ತೆಲಂಗಾಣದ ನಿಖತ್​ ಜರೀನ್​, 50 ಕೆಜಿ ವಿಭಾಗದ ಫೈನಲ್‌ನಲ್ಲಿ ಆರ್‌ಎಸ್‌ಪಿಬಿಯ ಅನಾಮಿಕಾ ವಿರುದ್ಧ ​ 4-1 ರಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಸೆಮಿಫೈನಲ್‌ನಲ್ಲಿ ಝರೀನ್‌, ತೆಲಂಗಾಣದ ಬಾಕ್ಸರ್​ ಶಿವಿಂದರ್ ಕೌರ್ ಅವರನ್ನು 5-0 ಅಂತರದಿಂದ ಸೋಲಿಸಿದ್ದರು. ಈ ಮೂಲಕ ಝರೀನ್‌, ಪ್ರಸಕ್ತ ವರ್ಷ ತಮ್ಮ ಅಜೇಯ ಪಯಣವನ್ನು ಮುಂದುವರಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌, ಕಾಮನ್‌ವೆಲ್ತ್‌ ಗೇಮ್ಸ್‌, ಸ್ತ್ರಂದಜಾ ಮೆಮೋರಿಯಲ್‌ ಹಾಗೂ ಇದೀಗ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲೂ ತೆಲಂಗಾಣದ ಯುವ ಬಾಕ್ಸರ್‌ ವಿಜಯ ಪತಾಕೆ ಹಾರಿಸಿದ್ದಾರೆ.

Join Whatsapp