ಬಜ್ಪೆ: ಮೂಡಬಿದ್ರೆ ಕ್ಷೇತ್ರ ಸಮಿತಿ ವತಿಯಿಂದ ಘನತೆಯ ಸಮಾಜಕ್ಕೆ ಒಂದಾಗೋಣ ಎಂಬ ಘೋಷವಾಕ್ಯದಲ್ಲಿ ಸದಸ್ಯತ್ವ ಕಾರ್ಯಕ್ರಮವು ಬಜ್ಪೆಯ ಕಿನ್ನಿಪದವಿನಲ್ಲಿ ನಡೆಯಿತು.
ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ರವರು ಮಹಿಳೆಯವರು ಸಮಾಜದಲ್ಲಿ ಮುನ್ನಲೆಗೆ ಬಂದು ಸಕ್ರಿಯರಾದರೆ ಸಮಾಜದಲ್ಲಿ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ, ಇದಕ್ಕಾಗಿ ರಾಜಕೀಯ ಪ್ರಬುದ್ಧತೆಯು ಇಂದಿನ ಅನಿವಾರ್ಯತೆಯಾಗಿದೆ ಎಂದು ವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿಮ್ ಸದಸ್ಯತ್ವವನ್ನು ನೀಡಲಾಯಿತು,ಈ ಸಂದರ್ಭದಲ್ಲಿ ವಿಮ್ ಮೂಡಬಿದ್ರಿ ಕ್ಷೇತ್ರಾಧ್ಯಕ್ಷೆ ಫೌಝಿಯಾ ಬಜ್ಪೆ , ಕಾರ್ಯದರ್ಶಿ ಝೀನತ್ ಉಪಸ್ಥಿತರಿದ್ದರು.