ಬೆಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
ಸಭೆಯಲ್ಲಿ ರಾಜ್ಯದ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ, ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1.ದೇಶವನ್ನೇ ಬೆಚ್ಚಿ ಬೀಳಿಸಿದ ಪೆನ್ ಡ್ರೈವ್ ಹಗರಣಕ್ಕೆ ಬಲಿಪಶುವಾದ ಮಹಿಳೆಯರಿಗೆ ನ್ಯಾಯ ಸಿಗಲಿ
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣು ಮಕ್ಕಳ ಮೇಲೆ ನಡೆಸಿದ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿರುವುದಾಗಿ ಸಂತ್ರಸ್ತ ಮಹಿಳೆಯರೇ ದೂರು ನೀಡಿರುತ್ತಾರೆ. ಈ ಪ್ರಕರಣದ ಸಂಖ್ಯೆಯನ್ನು ಗಮನಿಸಿದರೆ ದೇಶದ ಅತಿ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಆಗಿರುತ್ತದೆ. ಈ ನೀಚ ಕೃತ್ಯದಲ್ಲಿ ಹಲವಾರು ರಾಜಕಾರಣಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು SIT ತನಿಖೆ ಮಾಡಲು ನೇಮಿಸಿರುವುದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಸ್ವಾಗತಿಸುತ್ತದೆ. ಆರೋಪಿ ಪ್ರಜ್ವಲ್ ರೇವಣ್ಣ ರವರು ದೇಶ ತೊರೆಯಲು ಸಹಕರಿಸಿದವರು ಯಾರು ಎಂಬ ಗಂಭೀರ ತನಿಖೆ ನಡೆಸಬೇಕು. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಚ ಕ್ರತ್ಯಗಳ ವೀಡಿಯೋವನ್ನು ಹಂಚಿದ ಆರೋಪಿಗಳಿಗೆ ತಕ್ಕುದಾದ ಶಿಕ್ಷೆಯನ್ನು ನೀಡುವುದರ ಮೂಲಕ ಪ್ರಕರಣದಲ್ಲಿ ನೊಂದ, ಶೋಷಣೆಗಳಾದ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಸಭೆಯು ಒತ್ತಾಯಿಸುತ್ತದೆ.
2. ಪತ್ರಿಕಾ ಧರ್ಮ ಮರೆತ ಧರ್ಮಾಂಧ ಮಾಧ್ಯಮಗಳು
ಕಳೆದ ಒಂದು ದಶಕದಿಂದೀಚೆಗೆ ಮಾಧ್ಯಮಗಳು ತೋರುತ್ತಿರುವ ತಾರತಮ್ಯ ನೀತಿಯು ಸಾಮಾಜಿಕ ಸ್ವಾಸ್ಥ್ಯ ಹದಗೆಡುವಲ್ಲಿ ಪ್ರಮುಖ ಪಾತ್ರ HB ವಹಿಸುತ್ತಿದೆ. ಮಾಧ್ಯಮ ವ್ಯವಸ್ಥೆಯ ನೈಜ ಸಿದ್ದಾಂತ, ವ್ರತ್ತಿ ನಿಷ್ಠೆಯನ್ನು ಮರೆತು ಪ್ರಭುತ್ವದ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಮಡಿಲ ಮೀಡಿಯಾಗಳು, ಫ್ಯಾಸಿಸ್ಟರಿಗಿಂತಲೂ ವೇಗವಾಗಿ ಫ್ಯಾಸಿಸ್ಟ್ ಸಿದ್ದಾಂತವನ್ನು ಪಸರಿಸುವಲ್ಲಿ ಯಶಸ್ವಿಯಾಗುತ್ತಿದೆ.
ಯಾವುದೇ ಅಪರಾಧ ಕ್ರತ್ಯಗಳಲ್ಲಿ ಅಪರಾಧಿಯು ಮುಸ್ಲಿಮ್ ನಾಮಧಾರಿಯಾಗಿದ್ಜರೆ ಆ ಅಪರಾಧಕ್ಕೆ ಸಂಪೂರ್ಣ ಸಮುದಾಯವನ್ನು ಹೊಣೆಯಾಗಿಸಲಾಗುತ್ತದೆ. ಇತ್ತ ಸಾವಿರಕ್ಕೂ ಮಿಗಿಲಾದ ಹೆಣ್ಣು ಮಕ್ಕಳ ಅತ್ಯಾಚಾರಗೈದ ಓರ್ವ ಅತ್ಯಾಚಾರಿಯ ವಿಚಾರದಲ್ಲಿ ಆತನ ಸ್ವತಃ ಕುಟುಂಬದ ಹೆಸರೆತ್ತದಂತೆ ಫರ್ಮಾನು ಹೊರಡಿಸಲಾಗುತ್ತದೆ. ಆತನ ಹೀನ ಕೃತ್ಯವನ್ನು ವಿರೋಧಿಸುವುದಕ್ಕೂ ಮಿಗಿಲಾಗಿ ವೀಡಿಯೋ ಪ್ರಸಾರ ಮಾಡಿದ್ದನ್ನು ಅಪರಾಧವಾಗಿ ಬಿಂಬಿಸಲಾಗುತ್ತದೆ. ಇವೆಲ್ಲವೂ ಮಾಧ್ಯಮಗಳು ಕುಮ್ಮಕ್ಕಿನಿಂದ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ . ಮುಸ್ಲಿಮ್ ಜನಸಂಖ್ಯೆಯನ್ನು ತೋರ್ಪಡಿಸುವಲ್ಲಿ ಪರದೇಶ ಪಾಕಿಸ್ತಾನದ ಧ್ವಜ ಬಳಕೆ ಮಾಡಿ ಚಾನೆಲ್ ಒಂದು ವಿಕ್ರತಿ ಮೆರೆದಿದ್ದು , ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮರುಸ್ಥಾಪಿಸಲು ಪಣತೊಟ್ಟಂತೆ ಭಾಸವಾಗುತ್ತದೆ.
ಸ್ವತಃ ಈ ದೇಶದ ಪ್ರಧಾನಿಯೊಬ್ಬರು ತನ್ನ ಸ್ಥಾನದ ಘನತೆ, ಗಾಂಭೀರ್ಯತೆಯನ್ನು ಮರೆತು ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಧರ್ಮಾಧಾರಿತ ಭಾಷಣಗೈಯ್ಯುತ್ತಿದ್ದರೆ , ಬಹಿರಂಗವಾಗಿ ಮುಸ್ಲಿಮ್ ಸಮುದಾಯವನ್ನು ನಿಂದಿಸುತ್ತಿದ್ದರೆ ಅದನ್ನು ಪ್ರಶ್ನಿಸುವ, ವಿರೋಧಿಸುವ ಗೋಜಿಗೆ ಹೋಗದೆ ಅವುಗಳಿಗೆ ಪೂರಕವಾಗಿ,ಬೆಂಬಲವಾಗಿ ವಿಷಯ ಪ್ರಸಾರದಲ್ಲಿ ನಿರತವಾಗುತ್ತದೆ. ಮಡಿಲ ಮೀಡಿಯಾಗಳ ಈ ಕಾರ್ಯ ವೈಖರಿಯು ದೇಶದ ಹಿತಾಸಕ್ತಿಗೆ ಮಾರಕವಾಗಿದೆ, ಪ್ರಜಾಪ್ರಭುತ್ವ ಸಿದ್ದಾಂತಕ್ಕೆ ಅಪಾಯಕಾರಿಯಾಗಿದೆ, ಹಾಗೂ ಸಂವಿಧಾನ ವಿರೋಧಿಯಾಗಿದೆ.
ಬಹುತೇಕ ಅನ್ಯಾಯ, ಅಕ್ರಮಗಳಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ, ಪ್ರಕರಣಗಳನ್ನು ಧರ್ಮಾಧಾರಿತವಾಗಿ ವಿಭಜಿಸಿ ಅತಿರೇಕದ ವರ್ಣನೆ ನೀಡುವ ಈ ಮಾರಿಕೊಂಡ ಮಾಧ್ಯಮಗಳ ಪಾಲು ತೀವ್ರ ಪ್ರಮಾಣದಲ್ಲಿದೆ ಎಂಬುದು ಕಟುವಾಸ್ತವವಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ಶಾಝಿಯ ಬೆಂಗಳೂರು, ಹಾಗೂ ರಾಜ್ಯ ಸಮಿತಿ ಸದಸ್ಯೆಯರು ಹಾಜರಿದ್ದರು.. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಸ್ವಾಗತಿಸಿ ವರದಿಯನ್ನು ವಾಚಿಸಿದರು.ಹಾಗೂ ರಾಜ್ಯ ಕಾರ್ಯದರ್ಶಿ ಸೈದಾ ಬೇಗಂ ಧನ್ಯವಾದವಿತ್ತರು.