ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಮಹಿಳೆಯರು ಧೈರ್ಯ ಮಾಡಲಿದ್ದಾರೆ: ಶಾಸಕ ಕದಲೂರು ಉದಯ್

Prasthutha|

ಮಂಡ್ಯ: ಪೆನ್‌ಡ್ರೈವ್ ಪ್ರಕರಣದ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ. ಅವರ ಆಪ್ತರೇ ಹಲವಾರು ಬಾರಿ ಹೇಳಿದ್ದಾರೆ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್​ ಶಾಸಕ ಕದಲೂರು ಉದಯ್​ ಹೇಳಿದ್ದಾರೆ.

- Advertisement -

ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಉದಯ್​, ಮಾಜಿ ಸಿಎಂ ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೇವೆ. ರಾಧಿಕಾ ಅವರನ್ನ ಪತ್ನಿ ರೀತಿ ಕಾಣುತ್ತಿದ್ದಾರಾ. ಈ ರೀತಿ ಬಹಳಷ್ಟು ನಡೆದಿರಬಹುದು. ಅವರ ಆಪ್ತರೆ ಹಲವಾರು ಬಾರಿ ಹೇಳಿದ್ದಾರೆ. ಕುಮಾರಸ್ವಾಮಿ ಏನು ಸಾಚಾ ಅಲ್ಲ. ಪೆನ್‌ಡ್ರೈವ್ ಪ್ರಕರಣ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡಲಿದೆ.

ಕುಮಾರಸ್ವಾಮಿ ಏನ್ ಸಾಚಾನ, ಮಗಳ ವಯಸ್ಸಿನವರನ್ನ ಪುಸಲಾಯಿಸಿ ಮಗಳು ಹುಟ್ಟಿಸಿ ರೋಡ್‌ನಲ್ಲಿ ಬಿಟ್ಟಿದ್ದಾರೆ. ಕುಮಾರಸ್ವಾಮಿ ನೀಚ ಕೆಲಸ ಮಾಡಿದ್ದಾರೆ. ಸಿಎಂ ಆಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರ. ಜೀವನದುದ್ದಕ್ಲೂ ಬ್ಲಾಕ್​​ಮೇಲ್, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ‌. ಬೇರೆಯವರನ್ನ ಮುಳುಗಿಸಿದ್ದೆ ಕುಮಾರಸ್ವಾಮಿ ಸಾಧನೆ. ಇವರ ಮನೆ ಹೆಣ್ಣು ಮಕ್ಕಳು ಮರ್ಯಾದೆ ರೋಡ್‌ನಲ್ಲಿ ಹರಾಜಾಗಿದ್ದರೆ ಪ್ರತಿಭಟನೆ ಮಾಡ್ತಿದ್ರಾ ಸ್ವಂತಕ್ಕೆ ಬೇಕಾಗಿರೋದನ್ನ ಮಾತ್ರ ಕುಮಾರಸ್ವಾಮಿ ಮಾಡ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

- Advertisement -

ಯಾವ ಘನಕಾರ್ಯ ಮಾಡಿದ್ದಾರೆಂದು ಜೆಡಿಎಸ್​ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಸಂತ್ರಸ್ತೆಯರ ಪರ ಯಾವ ಜೆಡಿಎಸ್‌ ನಾಯಕರು ಧ್ವನಿ ಎತ್ತಿಲ್ಲ. ಅವರಿಗೆ ಧೈರ್ಯ ಹೇಳಿ, ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್ ಪ್ರತಿಭಟನೆ ಮಾಡುತ್ತಿದೆ . ಕಾಂಗ್ರೆಸ್ ಸರ್ಕಾರ ನೀಚ ಸರ್ಕಾರ ಅಂತಾರೆ. ಬಡವರಿಗೆ ಯೋಜನೆ ಕೊಟ್ಟ ಸರ್ಕಾರ ನೀಚ ಸರ್ಕಾರನಾ. ಗ್ರಾಮ ಪ.ಚಾಯತಿಯಿಂದ ವಿಧಾನಸಭೆವರೆಗೂ ದಬ್ಬಾಳಿಕೆಯ ಮಾಡಿಕೊಂಡೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp