ಅಲ್ಪಸಂಖ್ಯಾತರ ಆಯೋಗ, ವಕ್ಫ್ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು: ಯು.ಟಿ ಫರ್ಝಾನ ಆಗ್ರಹ

Prasthutha|

ಉಡುಪಿ : ಅಲ್ಪಸಂಖ್ಯಾತರ ಅಭಿವೃದ್ಧಿ ಆಯೋಗ ಮತ್ತು ವಕ್ಫ್ ಮಂಡಳಿಯ ಹುದ್ದೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕೆಪಿಸಿಸಿ ವಕ್ತಾರೆ ಅಯಿಷಾ ಫರ್ಝನಾ ಯು.ಟಿ ಆಗ್ರಹಿಸಿದ್ದಾರೆ.

- Advertisement -

ಉಡುಪಿಯ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ  ಮಹಿಳಾ ಚೈತನ್ಯ ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,  ಕರ್ನಾಟಕದಲ್ಲಿ‌ ತುಂಬಾ ಆಯೋಗಗಳಿವೆ, ಅದರಲ್ಲಿ ಪುರುಷರು, ಮಹಿಳೆಯರು ಇರ್ತಾರೆ,  ಆದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಆಯೋಗ ಮತ್ತು ವಕ್ಫ್ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶ  ಸಿಗುತ್ತಿಲ್ಲ, ಸರ್ಕಾರ ಈ‌ ತಪ್ಪನ್ನು‌ ಸರಿಪಡಿಸಿ‌ ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಗತ್ತನ್ನು ಕಾಡುತ್ತಿರುವ ಇಸ್ಲಾಮೋಫೋಬಿಯಾವನ್ನು ತೊಡೆದು ಹಾಕಲು  ಮುಸ್ಲಿಂ ಮಹಿಳೆಯರು ಮನೆಬಿಟ್ಟು ಹೊರಗೆ ಬರ್ಬೇಕು, ಅವಾಗ ಇಸ್ಲಾಮೋಫೋಬಿಯಾ ಎಂಬ ವಿಷ ನಿಧಾನವಾಗಿ ಕರಗಿ ಹೋಗುತ್ತದೆ ಎಂದು ಅವರು ಹೇಳಿದರು.

- Advertisement -

ಮಹಿಳೆಯರು ಇನ್ಮುಂದೆ ಅಧಿಕಾರ ಹಿಡಿಯುವವರಾಗಬೇಕು, ರಾಜಕಾರಣ, ಉದ್ಯಮ, ಕೈಗಾರಿಕೆ, ಬ್ಯಾಂಕಿಂಗ್, ಮಾಧ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲೂ ಮಹಿಳೆಯರು ಉನ್ನತ ಸ್ಥಾನಮಾನ ಪಡೆಯಬೇಕು, ಅವಾಗ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ, ಮಹಿಳೆಯರ ಅಭ್ಯುಧಯಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.



Join Whatsapp