ಆಗಮ ಶಾಸ್ತ್ರ ತರಬೇತಿ ಹೊಂದಿದ ಮಹಿಳೆಯರಿಗೆ ದೇವಸ್ಥಾನದ ಅರ್ಚಕರನ್ನಾಗಿ ನೇಮಿಸಲು ತಮಿಳುನಾಡು ಸರಕಾರ ಚಿಂತನೆ

Prasthutha|

ಚೆನ್ನೈ : ಆಗಮ ಶಾಸ್ತ್ರ ತರಬೇತಿ ಹೊಂದಿದ ಮಹಿಳೆಯರನ್ನು ಹಿಂದೂ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಮಿಳುನಾಡು ದೇವಸ್ಥಾನ ಆಡಳಿತ ಸಚಿವ ಶೇಖರ್ ಬಾಬು ಹೇಳಿದ್ದಾರೆ. ಸಚಿವರ ಹೇಳಿಕೆ ಹೊರಬಿದ್ದ ಬಳಿಕ ದೇವಸ್ಥಾನಗಳಲ್ಲಿ ಮಹಿಳಾ ಅರ್ಚಕರನ್ನು ನೇಮಕ ಮಾಡುವ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ.

- Advertisement -

ಈ ಬಗ್ಗೆ ಈ ಹಿಂದೆ ಸರಕಾರದ ಮಟ್ಟದಲ್ಲಿ ಯಾವುದೇ ಚರ್ಚೆಗಳಾಗಿರಲಿಲ್ಲ, ಆದರೆ, ಆಗಮ ಶಾಸ್ತ್ರದಲ್ಲಿ ತರಬೇತಿ ಹೊಂದಿದ ಮಹಿಳೆಯರು ದೇವಸ್ಥಾನದ ಅರ್ಚಕರಾಗಲು ಬಯಸಿದರೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇಂತಹ ಯೋಚನೆಗೆ ಸಮಾಜದ ಮಾನ್ಯತೆ ಸಿಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ವಿಚಾರಗಳ ಬಗ್ಗೆ ಗಮನ ಹರಿಸಲಾಗುವುದು, ಮುಟ್ಟಿನ ವೇಳೆ ಸಂಪ್ರದಾಯ ಆಚರಣೆಗಳಿಂದ ದೂರವಿರಲು ಐದು ದಿನ ರಜೆ ನೀಡುವ ಬಗ್ಗೆಯೂ ಚಿಂತಿಸಲಾಗುವುದು ಎಂದಿದ್ದಾರೆ.

- Advertisement -

2008ರಲ್ಲಿ ಮದ್ರಾಸ್ ಹೈಕೋರ್ಟ್, ಮಹಿಳೆಯೊಬ್ಬರಿಗೆ ತಮ್ಮ ಅರ್ಚಕ ತಂದೆಯ ನಿಧನದ ಬಳಿಕ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶ ನೀಡಿತ್ತು.

Join Whatsapp