ವಿಮೆನ್ ಇಂಡಿಯಾ ಮೂವ್ಮೆಂಟ್ ಗುಲ್ಬರ್ಗಾ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ

Prasthutha|

ಗುಲ್ಬರ್ಗಾ: ವಿಮೆನ್ ಇಂಡಿಯಾ ಮೂವ್ಮೆಂಟ್ ಗುಲ್ಬರ್ಗ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ವಿಶೇಷ ಸಭೆ ಗುಲ್ಬರ್ಗದ ಅಲ್ಟಮಾಸ್ ಗೆಸ್ಟ್ ಹೌಸ್ ನಲ್ಲಿ ನಡೆಯಿತು.

- Advertisement -


ನೂತನ ಜಿಲ್ಲಾಧ್ಯಕ್ಷರಾಗಿ ಸಮೀನಾ ಬೇಗಮ್, ಪ್ರಧಾನ ಕಾರ್ಯದರ್ಶಿ ಕನೀಸ್ ಫಾತಿಮಾ, ಕಾರ್ಯದರ್ಶಿಗಾಗಿ ಸಲೇಹಾ ಹಾಗೂ ಕೋಶಾಧಿಕಾರಿ ಜಮೀನಿನ ಬೇಗಂ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಆಫ್ರಿನ ಬೇಗಂ, ಆಯಿಷ ಬೇಗಂ, ಅಸ್ಮಬೇಗಂ, ವಹೀದ, ಶಹೀರ ಬೇಗಂ ಆಯ್ಕೆಯಾಗಿರುತ್ತಾರೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾದಿಯಾ ಸಯೀದಾ ( ರಾಜ್ಯ ಉಪಾಧ್ಯಕ್ಷೆ ಎಸ್. ಡಿ. ಪಿ. ಐ) ರವರು ಪ್ರಸಕ್ತ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು ಹಾಗೂ ವಿಮೆನ್ ಇಂಡಿಯ ಮೂವ್’ಮೆಂಟ್ ರಾಜ್ಯ ಕೋಶಾಧಿಕಾರಿಯಾದ ರೆಹನಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Join Whatsapp