ಡ್ರಮ್’ನಲ್ಲಿ ಮಹಿಳೆ ನಿಗೂಢ ಶವ ಪತ್ತೆ: ಮೂವರು ಬಂಧನ, ಐವರಿಗೆ ಶೋಧ

Prasthutha|

ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಡ್ರಮ್’ನಲ್ಲಿ ಮಹಿಳೆಯ ನಿಗೂಢ ಶವ ಪತ್ತೆ ಪ್ರಕರಣದ ರಹಸ್ಯ ಭೇದಿಸಿರುವ ರೈಲ್ವೇ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -


ಬಿಹಾರದ ಅರಾರಿಯಾ ಜಿಲ್ಲೆಯ ತಮನ್ನಾ (27) ಕೊಲೆಯಾದ ಮಹಿಳೆಯಾಗಿದ್ದು, ಆಕೆಯನ್ನು ಕೊಲೆಗೈದು ಡ್ರಮ್’ನಲ್ಲಿ ತುಂಬಿ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಇಟ್ಟು ಹೋಗಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಡಾ.ಸೌಮ್ಯಲತಾ ತಿಳಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳು ಭಾಗಿಯಾಗಿದ್ದು ಅವರಲ್ಲಿ ಬಿಹಾರ ಮೂಲದ ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಮಾಲ್ (21), ತನ್ವೀರ್ (24) ಹಾಗೂ ಶಾಕೀಬ್ (25) ಸೇರಿ ಮೂವರನ್ನು ಬಂಧಿಸಿ ಉಳಿದವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದರು.
ಕೊಲೆಯಾಗಿ ಭಾಗಿಯಾಗಿ ತಲೆ‌ಮರೆಸಿಕೊಂಡಿರುವ ನವಾಬ್ ಹಾಗೂ ಇಂತಿಕಾಬ್ ಸ್ವಂತ ಅಣ್ಣ-ತಮ್ಮಂದಿರಾಗಿದ್ದು ಈಗಾಗಲೇ ವಿವಾಹವಾಗಿ ಪತಿಯನ್ನು ತೊರೆದಿದ್ದ ತಮನ್ನಾ ಇಂತಿಕಾಬ್’ನನ್ನು ಪುಸಲಾಯಿಸಿ ವಿವಾಹವಾಗಿದ್ದಳು. ಇದೇ ವಿಚಾರಕ್ಕೆ ಇಂತಿಕಾಮ್ ಮತ್ತು ಸಹೋದರರ ನಡುವೆ ವೈಮನಸ್ಸು ಮೂಡಿದ್ದು ಇದಕ್ಕೆಲ್ಲಾ ತಮನ್ನಾ ಕಾರಣ ಎಂದು ನವಾಬ್ ಆಕ್ರೋಶಗೊಂಡು ಆಕೆಯ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.


ಅದರಂತೆ ಕಳೆದ ಮಾ.12ರಂದು ಆರೋಪಿಗಳು ಕಲಾಸಿಪಾಳ್ಯದ ಮನೆಗೆ ತಮನ್ನಾಳನ್ನು ಊಟಕ್ಕೆ ಕರೆದಿದ್ದರು. ಊಟವಾದ ನಂತರ ಜಗಳ ಶುರುವಾಗಿತ್ತು. ಈ ಜಗಳದಲ್ಲಿ ತಮ್ಮನ್ನಾಳನ್ನು ವೇ’ಲ್ನಿಂಮದ ಬಿಗಿದು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಡ್ರಮ್’ನಲ್ಲಿಟ್ಟು ಬಿಹಾರಕ್ಕೆ ಸಾಗಿಸಲು ಯತ್ನಿಸಿದ್ದರು.
ಆದರೆ ಶವ ಸಾಗಿಸಲು ಸಾಧ್ಯವಾಗದೇ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶವ ಬಿಟ್ಟು ಪರಾಗಿಯಾಗಿದ್ದರು.
ಮಾ.14 ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಆವರಣದಲ್ಲಿ ಡ್ರಮ್’ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮೂವರಿಂದ ನಾಲ್ಕು ಮಂದಿ ಆರೋಪಿಗಳು ಆಟೋದಲ್ಲಿ ಬಂದು ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಡ್ರಮ್’ನಲ್ಲಿ ಶವವಿಟ್ಟು ಪರಾರಿಯಾಗಿದ್ದ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

- Advertisement -


ಪ್ರಕರಣದ ತನಿಖೆ ಚುರುಕುಗೊಳಿಸಿ ಮಹಿಳೆಯ ಗುರುತು ಮತ್ತು ಆರೋಪಿಗಳ ಪತ್ತೆಗಾಗಿ ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್’ಪೆಕ್ಟರ್ ಒಳಗೊಂಡ ಮೂರು ವಿಶೇಷ ತಂಡವನ್ನೂ ರಚಿಸಿ ಕಂಟೋನ್ಮೆಂಟ್ ರೈಲ್ವೆ ಠಾಣೆಯ ಇನ್ಸ್’ಪೆಕ್ಟರ್ ಪ್ರಭಾಕರ್ ಅವರು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದ‌ವು. ಆರೋಪಿಗಳೆಲ್ಲರೂ ಸ್ಥಳೀಯ ಕೂಲಿ ಕಾರ್ಮಿಕರು ಎನ್ನುವುದು ಪತ್ತೆಹಚ್ಚಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೌಮ್ಯಲತಾ ಹೇಳಿದರು.
ಪ್ರಕರಣ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ತಂಡಗಳನ್ನು ಡಿಜಿಪಿ ಪ್ರವೀಣ್ ಸೂದ್ ಅವರು ಪ್ರಶಂಸಿಸಿ 50ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ ಎಂದರು.



Join Whatsapp