ಮಹಿಳೆಯ ಡೇರ್‌ಡೆವಿಲ್ ವಿಂಡೋ-ಕ್ಲೀನಿಂಗ್: ವಿಡಿಯೋ ವೈರಲ್

Prasthutha|

ಸಾಮಾನ್ಯವಾಗಿ ದೀಪಾವಳಿ ಹಬ್ಬ ಬರುತ್ತಿದ್ದಂತೆಯೇ ಗೋಡೆಗಳನ್ನು ಸ್ವಚ್ಛಗೊಳಿಸುವುದು, ಪೇಂಟ್ ಮಾಡುವುದು ಮತ್ತು ಮನೆಯೊಳಗಿನ ಸೀಲಿಂಗ್ ಫ್ಯಾನ್‌ಗಳಿಂದ ಧೂಳನ್ನು ತೆಗೆದುಹಾಕುವುದು ಮುಂತಾದವುಗಳ ಮೂಲಕ ಸಿದ್ಧತೆಗಳನ್ನು ನಡೆಸುವುದು ಸಾಮಾನ್ಯ.

- Advertisement -

ಈ ಭರದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ಅಪಾರ್ಟ್ಮೆಂಟ್ ನ ಕಿಟಕಿಯನ್ನು ಸ್ವಚ್ಛಗೊಳಿಸುತ್ತಿರುವ ಡೇರ್ ಡೆವಿಲ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಿಟಕಿಯನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾದರೂ, ಇದು ಮನೆ ನಾಲ್ಕನೇ ಮಹಡಿಯಲ್ಲಿದ್ದು, ಮಹಿಳೆ ಹೊರಗಿನಿಂದ ಕಿಟಕಿಗಳನ್ನು ಸ್ವಚ್ಛಗೊಳಿಸುತ್ತಿದ್ದಾಳೆ.

- Advertisement -

ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಮನೆಯ ಕಿಟಕಿಯಿಂದ ಹೊರಗೆ ಬಂದು, ಬೆಂಬಲವಿಲ್ಲದೆ ಹತ್ತಿ, ಬಟ್ಟೆಯಿಂದ ಗಾಜಿನ ಫಲಕಗಳನ್ನು ಹೊರಗಿನಿಂದ ಒರೆಸುತ್ತಿರುವುದನ್ನು ಕಾಣಬಹುದು.

ಈ ವಿಡಿಯೋ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಡೇರ್ ಡೆವಿಲ್ ವುಮನ್ ಎನ್ನುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Whatsapp