ಸುಳ್ಯ | ಗೋಣಿ ಚೀಲದಲ್ಲಿ ಯುವತಿಯ ಶವ ಪತ್ತೆ: ನಾಪತ್ತೆಯಾಗಿದ್ದ ಪತಿಯ ಬಂಧನ

Prasthutha|

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೀರಮಂಗಲದ ಬಾಡಿಗೆ ಮನೆಯಲ್ಲಿ ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

- Advertisement -


ಬಂಧಿತನನ್ನು ಪಶ್ಚಿಮ ಬಂಗಾಳದ ಇಮ್ರಾನ್ ಶೇಖ್ ಎಂದು ಗುರುತಿಸಲಾಗಿದೆ.


ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿರುವ ಇಮ್ರಾನ್ ತನ್ನ ಪತ್ನಿಯನ್ನು ಹತ್ಯೆಮಾಡಿ ಮೃತದೇಹ ಗೋಣಿಚೀಲದೊಳಗೆ ಹಾಕಿದ್ದನು. ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಕಳೆದ ಆರು ತಿಂಗಳಿನಿಂದ ದಂಪತಿ ವಾಸವಾಗಿದ್ದು, ಇಮ್ರಾನ್ ಊರಿಗೆಂದು ಹೊರಟು ಹೋಗಿದ್ದಾಗ ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗಿಲ್ಲ.
ಇದರಿಂದ ಸಂಶಯಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಬಾಗಿಲು ಒಡೆದು ನೋಡಿದಾಗ ಗೋಣಿಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.

Join Whatsapp