ಆನ್’ಲೈನ್ ಪ್ರೇಮಿಯನ್ನು ನೋಡಲು 5,000 ಕಿಲೋಮೀಟರ್ ಹಾರಿ ಬಂದ ಮಹಿಳೆಯ ಕೊಲೆ, ಅಂಗಾಂಗ ಕಳ್ಳತನ

Prasthutha|

ಲಿಮಾ: ಮೆಕ್ಸಿಕೋದ 51ರ ಹರೆಯದ ಮಹಿಳೆಯೊಬ್ಬರು ತನ್ನ ಆನ್’ಲೈನ್ ಪ್ರಿಯಕರನನ್ನು ಭೇಟಿಯಾಗಲು  5000 ಕಿ.ಮಿ. ದೂರದಲ್ಲಿರುವ ಪೆರುವಿಗೆ ಹೋಗಿದ್ದು, ಅಲ್ಲಿ ಆಕೆಯನ್ನು ಕೊಂದು ಆಕೆಯ ಅಂಗಾಂಗಗಳನ್ನು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

- Advertisement -

ಮೃತಪಟ್ಟ ಮಹಿಳೆಯನ್ನು ಬ್ಲಾಂಕಾ ಅರೆಲ್ಲಾನೋ ಎಂದು ಗುರುತಿಸಲಾಗಿದೆ.

ನವೆಂಬರ್ 9ರಂದು ಹೌಚೋ ಬೀಚ್ ಬಳಿ ಕತ್ತರಿಸಲ್ಪಟ್ಟ ರೀತಿಯಲ್ಲಿ ಆಕೆಯ ದೇಹ ನೀರಿನಲ್ಲಿ ತೇಲುತ್ತಿರುವುದನ್ನು ಮೀನುಗಾರನೊಬ್ಬ ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.

- Advertisement -

ತಾನು ಲಿಮಾಕ್ಕೆ ಹೋಗುವುದಾಗಿಯೂ, ಅಲ್ಲಿ ನಾನು ಹಲವು ತಿಂಗಳುಗಳಿಂದ ಆನ್’ಲೈನ್ ಮೂಲಕ ಪ್ರೀತಿಸುತ್ತಿರುವ ಜುವಾನ್ ಪ್ಯಾಬ್ಲೋ ಜೀಸಸ್ ವಿಲ್ಲಾಪುರ್ಟ್ ಎಂಬಾತನನ್ನು ಭೇಟಿಯಾಗಲಿದ್ದೇನೆ ಎಂದು ಜುಲೈ ತಿಂಗಳಲ್ಲಿ ಬ್ಲಾಂಕಾ ಅರೆಲ್ಲಾನೋ ತನ್ನ ಕುಟುಂಬದವರಿಗೆ ತಿಳಿಸಿದ್ದಳು.

ಯೋಜನೆಯಂತೆ ಆಕೆಯ ಪೆರುವಿನ 37ರ ಹರೆಯದ ಪ್ರಿಯಕರ  ಹೌಚೊ ಬೀಚ್ ಬಳಿ ವಾಸಿಸುವುದಾಗಿಯೂ ಅಲ್ಲಿ ಭೇಟಿಯಾಗುವುದಾಗಿಯೂ ಅರೆಲ್ಲಾನೊ ಮನೆಯವರಿಗೆ ತಿಳಿಸಿದ್ದಳು.

ಆದರೆ ನವೆಂಬರ್ 7ರ ಬಳಿಕ ಮನೆಯವರಿಗೆ ಆಕೆಯಿಂದ ಯಾವುದೇ ಸುದ್ದಿ ಬಾರದ ಹಿನ್ನೆಲೆಯಲ್ಲಿ ಎಲ್ಲರೂ ಆತಂಕಕ್ಕೀಡಾದರು. ಆಸ್ಟ್ರೇಲಿಯನ್ ನ್ಯೂಸ್ ಕಾರ್ಪಸ್ಸ್ ತನಿಖಾ ವರದಿಯಂತೆ, ಬ್ಲಾಂಕಾ ಅರೆಲ್ಲಾನೋರ ಸೋದರ ಸೊಸೆ ಕಾರ್ಲಾ ಅರೆಲ್ಲಾನೋ ನವೆಂಬರ್ 7ರಂದು ಕೊನೆಯದಾಗಿ ಆಕೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಳು. ಆಗ ಆಕೆ ಸಂಬಂಧ ಚೆನ್ನಾಗಿ ಹೊಂದಾಣಿಕೆಯಾಗಿದೆ, ನಾನು ಪ್ರೀತಿಯಲ್ಲಿದ್ದೇನೆ ಎಂದು ಆಗ ಹೇಳಿದ್ದಳು.

ಇದೇ ಕೊನೆ, ಬ್ಲಾಂಕಾ ಏನಾದಳೆಂದು ಮೆಕ್ಸಿಕೋದ ಮನೆಯವರಿಗೆ ತಿಳಿಯಲಿಲ್ಲ. ಎರಡು ವಾರ ನೀರವ ಮೌನ. ಬ್ಲಾಂಕಾರನ್ನು ಪತ್ತೆ ಹಚ್ಚಲು ನಮಗೆ ಸಹಕರಿಸುವಂತೆ ಸೋದರ ಸೊಸೆ ಕ್ಲಾರಾ ಅವರು ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡರು. ಇದನ್ನು ಗಮನಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

“ನಾನು ಈ ಸ್ಥಿತಿಗೆ ಬರುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನ ಬದುಕಿನಲ್ಲಿ ಬಹಳ ಮುಖ್ಯರಾದ ಮತ್ತು ಪ್ರೀತಿಪಾತ್ರರಾದ ಒಬ್ಬರು ಎಲ್ಲಿದ್ದಾರೆ ಎಂದು ಕಂಡು ಹಿಡಿಯಲು ನೀವು ನನಗೆ ಸಹಾಯ ಮಾಡಿ ಎಂದು ಕಾರ್ಲಾ ಟ್ವಿಟರ್ ಪೋಸ್ಟ್ ನಲ್ಲಿ ಬರೆದಿದ್ದರು.

  “ನನ್ನ ಸೋದರತ್ತೆ ಬ್ಲಾಂಕಾ ಒಲೀವಿಯಾ ಅರೆಲ್ಲಾನೋ ಗ್ಯಟಿರೆಜ್ ನವೆಂಬರ್ 7ರ ಸೋಮವಾರ ಪೆರುವಿನಲ್ಲಿ ನಾಪತ್ತೆಯಾಗಿದ್ದಾರೆ. ಮೆಕ್ಸಿಕೋ ಮೂಲದ ಅವರ ಬದುಕು ಈಗ ಅಪಾಯದಲ್ಲಿರುವುದಾಗಿ ನಾವು ಆತಂಕಗೊಂಡಿದ್ದೇವೆ ಎಂದು ಕ್ಲಾರಾ ಪೋಸ್ಟ್’ನಲ್ಲಿ ತಿಳಿಸಿದ್ದರು.

ಪೊಲೀಸರಿಗೆ ಅಪರಿಚಿತ ಶವ ಸಿಕ್ಕಿದೆ. ಅದು ಅರೆಲ್ಲಾನೋರದು ಎಂದು ದೃಢವಾಗಿದೆ. ಆಕೆಯ ಕೆಲವು ಅಂಗಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆನ್’ಲೈನ್ ಮೂಲಕ ಪರಿಚಯ ಮಾಡಿಕೊಂಡ ನಕಲಿ ಪ್ರೇಮಿಯೇ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ.

Join Whatsapp