ಬೆಂಗಳೂರು ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂ. ಮೌಲ್ಯದ ಕೊಕೇನ್ ವಶ; ಮಹಿಳೆ ಬಂಧನ

Prasthutha|

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು 30 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.

- Advertisement -

ಆಫ್ರಿಕಾ ಖಂಡದ ಅಡಿಸ್ ಅಬಾಬಾ ಇಥಿಯೋಪಿಯಾ ದೇಶದದಿಂದ ಇಥಿಯೋಪಿಯನ್ ಏರ್‌ಲೈನ್ಸ್​​​​​ ಮೂಲಕ 38 ವರ್ಷದ ಲೈಬೀರಿಯನ್ ಮಹಿಳೆ ಶುಕ್ರವಾರ (ಮೇ.27) ರಂದು ಮುಂಜಾನೆ ಕೆಐಎಗೆ ಆಗಮಿಸಿದ್ದಳು. ಪ್ರವಾಸಿ ವೀಸಾ ಹೊಂದಿದ್ದ ಮಹಿಳೆಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಅಧಿಕಾರಿಗಳು ಪರಿಶೀಲಿಸಿದಾಗ ಹ್ಯಾಂಡ್ ಬ್ಯಾಗ್​​ನಲ್ಲಿ ಕೊಕೇನ್ ಪತ್ತೆಯಾಗಿದೆ. ಕೂಡಲೆ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದಾರೆ.

ಆಫ್ರಿಕಾದಿಂದ ದೊಡ್ಡ ಪ್ರಮಾಣದ ಕೊಕೇನ್ ಕಳ್ಳಸಾಗಣೆಯಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬೆಂಗಳೂರಿನ ಡಿಆರ್‌ಐ ತಂಡವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆಯು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಇಚ್ಚಿಸಿದ್ದಾಳೆ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ.

- Advertisement -

ಸದ್ಯ ಅಧಿಕಾರಿಗಳು ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬಂಧಿಸಿದ್ದಾರೆ. ಮಹಿಳೆ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾಳೆ.



Join Whatsapp