ಬೃಹತ್ ಗಾತ್ರದ ಮರ ಬಿದ್ದು ಮಹಿಳಾ ಪೊಲೀಸ್ ಸ್ಥಳದಲ್ಲೇ ಸಾವು

Prasthutha|

ಚೆನ್ನೈ : ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದ ಕರ್ತವ್ಯನಿರತ ಮಹಿಳಾ ಹೆಡ್ ಕಾನ್ಸ್ ಸ್ಟೆಬಲ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.

- Advertisement -


ತಮಿಳುನಾಡು ಮುಖ್ಯಮಂತ್ರಿಯ ಸ್ಪೆಷಲ್ ಸೆಲ್ ಸಮೀಪದ ಸೆಂಟ್ ಜಾರ್ಜ್ ಸೆಕ್ರಟ್ರಿಯೇಟ್ ಕ್ಯಾಂಪಸ್’ನಲ್ಲಿ ಮಂಗಳವಾರ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ಮಹಿಳಾ ಹೆಡ್ ಕಾನ್ಸ್ಟೇಬಲ್ ಕವಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾನ್ಸ್ ಸ್ಟೆಬಲ್ ಮುರುಗನ್ (48) ರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.


ಚೆನ್ನೈ ನಗರದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಈ ಕಾರಣದಿಂದಾಗಿ ಬೃಹತ್ ಗಾತ್ರದ ಮರವು ಬುಡ ಸಮೇತ ನೆಲಕ್ಕುರುಳಿದೆ. ದುರ್ಘಟನೆ ನಡೆದ ವೇಳೆ ಕವಿತಾ, ಮರದ ಕೆಳಗಡೆಯಿದ್ದ ಬೆಂಚ್’ ನಲ್ಲಿ ಕುಳಿತು ಬೆಳಗ್ಗಿನ ಉಪಹಾರ ಸೇವಿಸುತ್ತಿದ್ದರು ಎನ್ನಲಾಗಿದೆ. ರೋಯಾಪುರಂ ಟ್ರಾಫಿಕ್ ವಿಭಾಗದಲ್ಲಿದ್ದ ಕವಿತಾ ಹಾಗೂ ಮುರುಗನ್ ರನ್ನು ಸೆಂಟ್ ಜಾರ್ಜ್ ಸೆಕ್ರಟ್ರಿಯೇಟ್ ಕ್ಯಾಂಪಸ್’ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

- Advertisement -


ತಮಿಳುನಾಡು ಸಿಎಂ ಮೃತ ಕವಿತಾಳ ಮನೆಯವರಿಗೆ ಸಾಂತ್ವನ ಹೇಳಿದ್ದು, 10 ಲಕ್ಷ ರೂ, ಪರಿಹಾರ ಘೋಷಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಜೊತೆ ಮುಖ್ಯ ಕಾರ್ಯದರ್ಶಿ ವಿ ಇರಾಯ್ ಅನ್ಬು, ಡಿಜಿಪಿ ಸಿ. ಶೈಲೇಂದ್ರ ಬಾಬು ಭೇಟಿ ನೀಡಿದ್ದು, ಫೋರ್ಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.



Join Whatsapp