ಮೃತ ತಂದೆಯನ್ನು ಬದುಕಿಸಲು ಶಿಶು ಬಲಿಗೆ ಮುಂದಾದ ಮಹಿಳೆ!

Prasthutha|

ನವದೆಹಲಿ: ಮೃತಪಟ್ಟ ತಂದೆಯನ್ನು ಬದುಕಿಸಲು ಶಿಶುವನ್ನು ಅಪಹರಣ ಮಾಡಿ ಬಲಿ ನೀಡಲು ಮುಂದಾದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕೋಟ್ಲಾ ಮುಬಾರಕ್’ಪುರ ನಿವಾಸಿ ಶ್ವೇತಾ (25) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ.

ಈಕೆಯ ತಂದೆ ಅಕ್ಟೋಬರ್’ನಲ್ಲಿ ನಿಧನರಾಗಿದ್ದು, ಶಿಶುವನ್ನು ನರಬಲಿ ನೀಡಿದರೆ ತನ್ನ ತಂದೆಯನ್ನು ಬದುಕಿಸಬಹುದು ಎಂಬ ಆಲೋಚನೆಯಿಂದ ಈ ಕೃತ್ಯ ಎಸಗಿದ್ದಾಳೆ ಎಂದು ತನಿಖೆ ವೇಳೆ ಬಯಲಾಗಿದೆ.

- Advertisement -

ಮಹಿಳೆಯು ಸಫ್ದರ್’ಜಂಗ್ ಆಸ್ಪತ್ರೆಯಲ್ಲಿ ತಾನು ಜಚ್ಚಾ-ಬಚ್ಚಾ ಆರೈಕೆಗಾಗಿ ಕೆಲಸ ಮಾಡುವ ಎನ್’ಜಿಒ ಸದಸ್ಯೆ ಎಂದು ಹೇಳಿಕೊಂಡು ಶಿಶುವಿನ ತಾಯಿಯನ್ನು ಭೇಟಿಯಾಗಿದ್ದಳು. ಬಳಿಕ ಶಿಶುವನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅಪಹರಣ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಶಿಶು ಸುರಕ್ಷಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



Join Whatsapp