ಅತ್ಯಾಚಾರ ಆರೋಪ ಹೊರಿಸಿ ನಾಲ್ವರನ್ನು ಸಂಕಷ್ಟಕ್ಕೆ ಸಿಲುಕಿಸಿದ ಮಹಿಳೆಗೆ 10 ವರ್ಷ ಜೈಲು

Prasthutha|

ಮಧ್ಯಪ್ರದೇಶ: ನಾಲ್ವರನ್ನು ಸುಳ್ಳು ರೇಪ್ ಕೇಸಲ್ಲಿ ವರ್ಷಾನುಗಟ್ಟಲೆ ಕೋರ್ಟ್ಗೆ ಅಲೆಯುವಂತೆ ಮಾಡಿದ ಮಹಿಳೆಯೊಬ್ಬರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಧ್ಯಪ್ರದೇಶ ಕೋರ್ಟ್ ಆದೇಶಿಸಿದೆ.

- Advertisement -

2008ರಲ್ಲಿ ಮಧ್ಯಪ್ರದೇಶದ ರಾಜ್ ಗಢ ಜಿಲ್ಲೆಯ ಜೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 38 ವರ್ಷದ ಮಹಿಳೆ ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅದರಂತೆ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆಯು ವರ್ಷಾನುಗಟ್ಟಲೆ ನಡೆದು ನಾಲ್ವರು ಆರೋಪಿಗಳು ಅನೇಕ ಕಷ್ಟ, ಅವಮಾನ ಪಡಬೇಕಾಗಿತ್ತು. ಅತ್ಯಾಚಾರದಂಥ ಪ್ರಕರಣಗಳು ದಾಖಲಾದಾಗ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ರೀತಿಯು ಕಠೋರವೂ ಆಗಿರುತ್ತದೆ.

ಬರಬರುತ್ತಾ ಪೊಲೀಸರ ತನಿಖೆಯಲ್ಲಿ ಈ ಆರೋಪಿಗಳ ತಪ್ಪಿಲ್ಲ ಎಂದು ತಿಳಿದುಬಂದಿತ್ತು. ನಂತರ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ ನಾಲ್ವರ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಒಪ್ಪಿಕೊಂಡಿದ್ದಳು. ಬಳಿಕ ಕೇಸನ್ನ ವಾಪಸ್ ತೆಗೆದುಕೊಂಡಿದ್ದಳು. ಆದ್ದರಿಂದ ಅದಾಗಲೇ ಜೈಲಿನಲ್ಲಿದ್ದ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೊಂಡ ಅವರು ಮಹಿಳೆಯ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ 10 ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

- Advertisement -

ಮಹಿಳಾ ದೌರ್ಜನ್ಯ ಎಂದು ಸುಳ್ಳು ಕೇಸು ದಾಖಲಿಸುವ ಜನರಿಗೆ ಈ ತೀರ್ಪು ಪಾಠವಾಗಲಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.



Join Whatsapp