ದುಬೈಯಿಂದ ಕೇರಳಕ್ಕೆ ಬರುವಾಗ ವಿಮಾನದಲ್ಲೇ ಮೃತಪಟ್ಟ ಮಹಿಳೆ

Prasthutha|

ಎರ್ನಾಕುಲಂ: ದುಬೈಯಿಂದ ಕೊಚ್ಚಿಗೆ ವಿಮಾನದಲ್ಲಿ ಬರುತ್ತಿದ್ದ ಮಹಿಳೆಯೋರ್ವಳು ವಿಮಾನದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕೋಟ್ಟಯಂನ ಮಣಿಮಲ ನಿವಾಸಿ ಎಲ್ಸಾ ಮಿನಿ ಆಂಟನಿ ಎಂದು ಗುರುತಿಸಲಾಗಿದೆ.

- Advertisement -

ವಿಮಾನದಲ್ಲಿ ಮಹಿಳೆ ಪ್ರಜ್ಞಾಹೀನಳಾಗಿದ್ದು, ಕೂಡಲೇ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ವಿಮಾನ ಕೊಚ್ಚಿಯ ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಮೊದಲೇ ಎಲ್ಸಾ ಮೃತಪಟ್ಟಿದ್ದಾಳೆ.

ಮಹಿಳೆಯ ಜೊತೆ ಅವರ ಗಂಡ ಕೂಡಾ ಇದ್ದರು ಎಂದು ತಿಳಿದುಬಂದಿದೆ.

Join Whatsapp