ಬಸ್​ನಿಂದ ತಲೆ ಹೊರಹಾಕಿದ ಮಹಿಳೆಗೆ ಮತ್ತೊಂದು ವಾಹನ ಡಿಕ್ಕಿ, ಸ್ಥಳದಲ್ಲೇ ಮೃತ್ಯು

Prasthutha|

ಚಂಡೀಗಢ: ಮಹಿಳೆಯೊಬ್ಬರು ವಾಂತಿ ಬಂತೆಂದು ತಲೆ ಹೊರ ಹಾಕಿದಾಗ ಮತ್ತೊಂದು ವಾಹನ ತಲೆಗೆ ಡಿಕ್ಕಿ ಹೊಡೆದಿದ್ದು, ಎರಡು ವಾಹನಗಳ ನಡುವೆ ಮಹಿಳೆಯ ತಲೆ ನಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

- Advertisement -

ಉತ್ತರ ಪ್ರದೇಶದ ಪ್ರತಾಪ್‌ಗಢದಿಂದ ಬಂದಿದ್ದ ಬಾಬ್ಲಿ ಎಂಬ ಮಹಿಳೆ, ಕಾಶ್ಮೀರ್ ಗೇಟ್‌ನಿಂದ ಲುಧಿಯಾನಕ್ಕೆ ತೆರಳುವ ಹರಿಯಾಣ ರೋಡ್‌ವೇಸ್ ಬಸ್‌ಗೆ ಏರಿದ್ದರು.

ಇನ್ನೊಂದು ವಾಹನ ಬಸ್ಸನ್ನು ಓವರ್ ಟೇಕ್ ಗೆ ಯತ್ನಿಸಿದ ಸಂದರ್ಭದಲ್ಲೇ  ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹೊರ ಹಾಕಿದ್ದರು. ಆ ಸಂದರ್ಭದಲ್ಲಿ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.

- Advertisement -

ಮೃತ ಮಹಿಳೆಯೊಂದಿಗೆ ಆಕೆಯ ಸಹೋದರಿ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಇದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ನೊಂದು ವಾಹನಕ್ಕಾಗಿ ಶೋಧ ನಡೆಸಲಾಗುತ್ತಿದೆ.