ಜಿಮ್‌ನಲ್ಲಿ ಕುಸಿದ ಬಿದ್ದ ಮಹಿಳೆ: ಮೆದುಳಿನ ರಕ್ತನಾಳದ ಛಿದ್ರದಿಂದ ಸಾವು

Prasthutha|

ಬೆಂಗಳೂರು: ಕೆಲ ದಿನಗಳ ಹಿಂದೆ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಮಹಿಳೆ ಸಾವನ್ನಪ್ಪಿರುವುದು ಮೆದುಳಿನ ರಕ್ತನಾಳದ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಆಗಿರುವುದರಿಂದ ಸಂಭವಿಸಿರುವುದು ಪತ್ತೆಯಾಗಿದೆ. ಕಳೆದ ಮಾ.26 ರಂದು ಜಿಮ್ ಮಾಡುವಾಗ ಮಹಿಳೆಯು ಮೃತಪಟ್ಟಿರವುದು ಮೆದುಳಿನ ರಕ್ತನಾಳದ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ನಿಂದಾಗಿ ಎನ್ನುವುದು ಸಿವಿ ರಾಮನ್ ಆಸ್ಪತ್ರೆ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಂಡುಬಂದಿದೆ.

- Advertisement -


ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ಇರುವಾಗಲೇ ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್​ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ ಪ್ರಕರಣವು ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.


ಜಿಮ್ ವರ್ಕ್ ಔಟ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ ವಿನಯಾ, ಅವರು ಜಿಮ್​​ನಲ್ಲಿ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ದಾಖಲಾಗಿತ್ತು. ಜಿಮ್​ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗ ಸಾವನ್ನಪ್ಪುವ ಬಗ್ಗೆ ಹಲವು ಅಭಿಪ್ರಾಯಗಳು ಜನರಲ್ಲಿ ಇವೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡ ಜಿಮ್​ಗೆ ತೆರಳಿದ್ದ ವೇಳೆ ಮೃತಪಟ್ಟಿದ್ದರು. ಆಗಲೂ ಅತಿಯಾದ ವರ್ಕ್ ಔಟ್ ಮಾಡುವ ಬಗ್ಗೆ ಹಲವು ಮಾಹಿತಿಗಳು, ಪ್ರಶ್ನೆಗಳು ಜನರ ಮನಸಲ್ಲಿ ಮೂಡಿತ್ತು. ಈ ಘಟನೆಯೂ ಅದಕ್ಕೆ ಪೂರಕ ಎಂಬಂತೆ ನಡೆದಿತ್ತು. ಜಿಮ್​ನಲ್ಲಿ ವರ್ಕ್ ಔಟ್ ಮಾಡುತ್ತಲೇ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.

- Advertisement -


ಖಾಸಗಿ ಕಂಪೆನಿಯಲ್ಲಿ ಬ್ಯಾಕ್​​ ಗ್ರೌಂಡ್ ವೆರಿಫಿಕೇಷನ್ ಅಫೀಸರ್ ಆಗಿ ಕೆಲಸ ಮಾಡ್ತಿದ್ದರು. 35 ವರ್ಷದ ಅವಿವಾಹಿತ ವಿನಯ ಕುಮಾರಿ ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದು ಎರಡು ವರ್ಷಗಳಿಂದ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದ ವಿನಯ ಕುಮಾರಿ ಬೆಳಗ್ಗೆ ವೇಳೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಿ, ಕೆಲಸಕ್ಕೆ ತೆರಳುತ್ತಿದ್ದರು.

Join Whatsapp