ಕಡಬ: ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

Prasthutha|

ಮಂಗಳೂರು: ತೆಂಗಿನ ಮರದಿಂದ ಬಿದ್ದು 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲ್ಲೂಕಿನ ಸವಣೂರು ಸಮೀಪದ ಗ್ರಾಮದಲ್ಲಿ ನಡೆದಿದೆ.

- Advertisement -


ಮೃತರನ್ನು ಸುಚಿತ್ರಾ ಎಂದು ಗುರುತಿಸಲಾಗಿದೆ.


ಸುಚಿತ್ರಾ ಅವರು ತೆಂಗಿನ ಮರ ಹತ್ತುವ ಮತ್ತು ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರುವಾಸಿಯಾಗಿದ್ದು, ಬುಧವಾರ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಸುಚಿತ್ರಾ ಅವರು ತೆಂಗಿನ ಮರ ಹತ್ತುವ ಅವರ ಸಾಧನೆಯನ್ನು ಗುರುತಿಸಿ ವಿವಿಧ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.



Join Whatsapp