ಜೇನು ನೊಣ ಕಡಿತಕ್ಕೊಳಗಾಗಿ ಮಹಿಳೆ ಸಾವು

Prasthutha|

ಮಲ್ಪೆ: ಜೇನು ನೊಣ ಕಚ್ಚಿ 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನಲ್ಲಿ ನಡೆದಿದೆ.

- Advertisement -

ಮೃತ ಮಹಿಳೆಯನ್ನು ಸಂಪಾ (53) ಎಂದು ಗುರುತಿಸಲಾಗಿದೆ. ಎಂದಿನಂತೆ ಕುದ್ರುವಿನಲ್ಲಿರುವ ತೋಟಕ್ಕೆ ಹಸುಗಳಿಗೆ ಹುಲ್ಲು ತರಲು ಹೋಗಿದ್ದ ಈ ವೇಳೆ ಹುಲ್ಲು ಕೊಯ್ಯುವಾಗ ಜೇನು ನೊಣ ಕಚ್ಚಿರುವುದಾಗಿ ಮನೆಗೆ ಬಂದು ತಿಳಿಸಿದ್ದರು. ತಕ್ಷಣವೇ ಮನೆಯವರು ಸಂಪಾರವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು.

ತೀವ್ರ ಅಸ್ವಸ್ಥಗೊಂಡಿದ್ದ ಸಂಪಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Join Whatsapp