ಉತ್ತರ ಪ್ರದೇಶ: ಮಗನ ಕತ್ತು ಸೀಳಿ, ಸ್ಟವ್ ಮೇಲೆ ದೇಹವನ್ನು ಸುಡಲು ಯತ್ನಿಸಿದ್ದ ಮಹಿಳೆಯ ಬಂಧನ

Prasthutha|

ಬಿಜ್ನೋರ್: ಮಗನ ಕತ್ತು ಸೀಳಿ, ಸ್ಟವ್​ ಮೇಲೆ ದೇಹವನ್ನು ಸುಡಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ.

- Advertisement -

ಮಹಿಳೆ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ್ದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೊದಲು ಮಗುವಿನ ಕತ್ತು ಸೀಳಿ ನಂತರ ಶವವನ್ನು ಮನೆಗೊಳಗಿನ ಒಲೆಯ ಮೇಲೆ ಸುಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ದೇವಿ ಅವರ ಪತಿ ಕಪಿಲ್ ಕುಮಾರ್ ಅವರು ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗ ಸತ್ತಿರುವುದನ್ನು ಕಂಡಾಗ ನಿಜಾಂಶ ತಿಳಿದುಬಂದಿದೆ. ಆಘಾತಕ್ಕೊಳಗಾದ ಕುಮಾರ್ ತಕ್ಷಣ ಕುಟುಂಬ ಸದಸ್ಯರನ್ನು ಸಹಾಯಕ್ಕಾಗಿ ಕರೆದರು. ಕುಟುಂಬ ಸದಸ್ಯರು ಬಂದಾಗ, ದೇವಿ, ಸಲಿಕೆ ಹಿಡಿದು ಅವರನ್ನು ಮತ್ತು ಕುಮಾರ್ ಅವರನ್ನು ಮನೆಯಿಂದ ಓಡಿಸಿದರು.

ಘಟನೆಯ ಬಗ್ಗೆ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ಮತ್ತು ಸರ್ಕಲ್ ಆಫೀಸರ್ ಚಂದ್‌ಪುರ ಭರತ್ ಸೋಂಕರ್ ಆಗಮಿಸಿದರು. ಅವರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಕುಮಾರ್ ಅವರ ದೂರಿನ ಆಧಾರದ ಮೇಲೆ ದೇವಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

Join Whatsapp