ನವದೆಹಲಿ: ಬುಧವಾರ ವಿಶ್ವ ಸಂಸ್ಥೆ ಬಿಡುಗಡೆಗೊಳಿಸಿದ ಅಂಕಿಅಂಶ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿದೆ.
ವಿಶ್ವ ಸಂಸ್ಥೆಯ ಪ್ರಕಾರ ಈಗ ಭಾರತದ ಜನಸಂಖ್ಯೆಯು ಚೀನಾದ 142.57 ಕೋಟಿಯನ್ನು ಮೀರಿ 142.86 ಕೋಟಿಗೆ ಏರಿದೆ.
ವಿಶ್ವ ಸಂಸ್ಥೆಯು 1950ರಿಂದ ಲೋಕ ಜನಸಂಖ್ಯೆ ಲೆಕ್ಕ ಪಡೆಯುತ್ತಿದ್ದು, ಇಂದು ಮೊದಲ ಬಾರಿಗೆ ಭಾರತವು ಜನಸಂಖ್ಯೆಯಲ್ಲಿ ಬೇರೆಲ್ಲ ದೇಶಗಳನ್ನು ಹಿಂದಿಕ್ಕಿದೆ.
1960ರ ಮಾವೋ ಝೆಡಾಂಗ್ ನೀತಿಯ ಬಳಿಕ ಚೀನಾದ ಜನಸಂಖ್ಯೆ ಪ್ರಮಾಣ ಇಳಿಮುಖ ಆಗಿದೆ ಎನ್ನಲಾಗಿದೆ.
ಚೀನಾದ ಒಂದೇ ಮಗು ನೀತಿ ಜನನ ಪ್ರಮಾಣವನ್ನು ತೀರಾ ಇಳಿಸಿತ್ತು. ಈಗ ಚೀನಾ ಮತ್ತೆ ಎರಡು ಮಕ್ಕಳು ಎನ್ನುತ್ತಿದೆ. ಭಾರತವು 2011ರ ಬಳಿಕ ದಶಕದ ಜನಗಣತಿ ನಡೆಸಿಲ್ಲ. 2021ರ ಜನಗಣತಿ ಕೊರೋನಾ ಸಾಂಕ್ರಾಮಿಕದಿಂದಾಗಿ ಮೂಲೆ ಹಿಡಿದಿದೆ.