‘ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’ : ಇಂದು WIM ವೆಬಿನಾರ್ ಕಾರ್ಯಕ್ರಮ

Prasthutha|

ಬೆಂಗಳೂರು: ಜುಲೈ 1ರಿಂದ ಆಗಸ್ಟ್ 15ರ ವರೆಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಹಮ್ಮಿಕೊಂಡಿರುವ ‘ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’ ಜಾಗೃತಿ ಅಭಿಯಾನದ ಅಂಗವಾಗಿ ಇಂದು (15 ಆಗಸ್ಟ್ ಮಂಗಳವಾರ) ಸಂಜೆ 3.00 ಗಂಟೆಗೆ ವೆಬಿನಾರ್ ಕಾರ್ಯಕ್ರಮ ನಡೆಯಲಿದೆ.

ವಿಮೆನ್ ಇಂಡಿಯಾ ಮೂವೆಂಟ್‌ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮ ನಸೀಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

- Advertisement -

ವಿಮೆನ್ ಇಂಡಿಯಾ ಮೂವೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸೀನ್ ಇಸ್ಲಾಮ್ ಉದ್ಘಾಟನೆ ನೆರವೇರಿಸಲಿದ್ದು, ವಿಶೇಷ ಅತಿಥಿಗಳಾಗಿ ಮೈಸೂರು ಮಹಾವೀರ ಕಾಲೇಜಿನ ಉಪನ್ಯಾಸಕರಾದ ಜ್ಯೋತಿ, ಚಿಂತಕಿ ಹಾಗೂ ಬರಹಗಾರ್ತಿ ಮುಝಾಹಿದ ಮಂಗಳೂರು, ಚಿಂತಕಿ ಹಾಗೂ ಬರಹಗಾರ್ತಿ ಬಾರ್ಬರ ಬಾಯಿ‌ರ್ ಮೈಸೂರು ಭಾಗವಹಿಸಲಿದ್ದಾರೆ ಎಂದು ವಿಮೆನ್ ಇಂಡಿಯಾ ಮೂವೆಂಟ್ ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.




Join Whatsapp