ಬಂಟ್ವಾಳ ಠಾಣೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ WIM

Prasthutha|

ಮಂಗಳೂರು: ಆಧಾರ ರಹಿತವಾಗಿ ಮತ್ತು ಅನ್ಯಾಯವಾಗಿ ಮಹಿಳೆಯರ ವಿರುದ್ಧ 107 ನೋಟೀಸ್ ಜಾರಿಗೊಳಿಸಿರುವ ಬಂಟ್ವಾಳ ನಗರ ಠಾಣೆಯ ಉಪ ನಿರೀಕ್ಷಕ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಸದಸ್ಯೆ ಝುಲೈಖಾ ನೇತೃತ್ವದಲ್ಲಿ ಪಶ್ಚಿಮ ವಲಯ ಪೋಲೀಸ್ ಮಹಾ ನಿರೀಕ್ಷಕರು ಮತ್ತು ದಕ ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ದಾಖಲಿಸಲಿಸಲಾಗಿದೆ.

- Advertisement -

ಮಹಿಳೆಯರ ಬಗ್ಗೆ ಅವಾಚ್ಯವಾಗಿ ನಿಂದಿಸಿದ ಕಲ್ಲಡ್ಕ ಪ್ರಭಾಕರ ಭಟ್‌ನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಲು ಭದ್ರತೆ ಕೋರಿ WIM ನ ಜಿಲ್ಲಾ ನಾಯಕಿಯರು ಬಂಟ್ವಾಳ ನಗರ ಠಾಣೆಗೆ ತೆರಳಿದ್ದರು.ಆದರೆ ಪೋಲೀಸರು ಅವರನ್ನು ಠಾಣೆಯಲ್ಲಿ ಕಾಯುವಂತೆ ಮಾಡಿದ್ದು, ಮಾತ್ರವಲ್ಲ 107 ನೋಟೀಸ್ ಕೂಡಾ ಜಾರಿಗೊಳಿಸಿದ್ದರು.ಯಾವುದೇ ಅಪರಾಧಿ ಹಿನ್ನೆಲೆಯಿರದ ಮಹಿಳೆಯರ ವಿರುದ್ಧ ಈ ರೀತಿಯ ನಡೆಯು ಅನ್ಯಾಯ ಹಾಗೂ ಪಕ್ಷಪಾತೀ ಧೋರಣೆಯಾಗಿದೆ ಎಂದು WIM ಹೇಳಿದೆ.

- Advertisement -

ಈ ಕುರಿತು ಈಗಾಗಲೇ ರಾಜ್ಯ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಈಗ ದ.ಕ.ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ವಲಯ ಪೋಲೀಸ್ ಮಹಾ ನಿರೀಕ್ಷರಿಗೆ ದೂರನ್ನು ನೀಡಿದ್ದೇವೆ ಎಂದು ರಾಜ್ಯಾಧ್ಯಕ್ಷೆ ಫಾತಿಮ ನಸೀಮರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರಾಹಿತವಾಗಿ,ಅನ್ಯಾಯವಾಗಿ ಮಹಿಳೆಯರ ವಿರುದ್ಧ ನೋಟೀಸ್ ಬಿಡುಗಡೆಗೊಳಿಸಿರುವ ಬಂಟ್ವಾಳ ನಗರ ಠಾಣೆಯ ಉಪ ನಿರೀಕ್ಷಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸೂಕ್ತ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp