ಮಂಗಳೂರು : ಗರ್ಭಿಣಿ ಯುವತಿಗೆ ವೈದ್ಯರಿಂದ ಕಿರುಕುಳ ಆರೋಪ | ತನಿಖೆ ನಡೆಸಲು WIM ಮನವಿ

Prasthutha|

ಮಂಗಳೂರು : ಗರ್ಭಿಣಿ ಯುವತಿಗೆ ವೈದ್ಯರು ಕಿರುಕುಳ ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಂಡು ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕೆಂದು WIM ಪೋಲಿಸ್ ಕಮಿಷನರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಖತೀಜಾ ಜಾಸ್ಮಿನ್ ಎಂಬ ಗರ್ಭಿಣಿ ಯುವತಿಗೆ ಡಾಕ್ಟರ್ ಪ್ರಿಯಾ ಬಲ್ಲಾಲ್, ಡಾಕ್ಟರ್ ಜಯಪ್ರಕಾಶ್, ಡಾಕ್ಟರ್ ಮುರಳೀಧರ್ ಹಾಗೂ ಕೆಲವು ಆಸ್ಪತ್ರೆಗಳು ಕಿರುಕುಳ ನೀಡಿದೆ ಎಂದು ಆರೋಪಗಳು ಕೇಳಿ ಬರುತ್ತಿರುವುದರಿಂದ ಆರೋಪಿತರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಿದೆ.

- Advertisement -

ಕಿರುಕುಳ ನೀಡಿದ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧನ ಪ್ರಕ್ರಿಯೆಗಳನ್ನು ಕೂಡಲೇ ನಡೆಸಿ,ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂಶಾದ್ ಅಬೂಬಕರ್ (ವಿಮ್ ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಕಾಟಿಪಳ್ಳ 5ನೇ ವಾರ್ಡ್ ಕಾರ್ಪೊರೇಟರ್), ಶಾಹಿನ ಬೆಂಗರೆ (ಜಿಲ್ಲಾ ಸಮಿತಿ ಸದಸ್ಯೆ), ಫಾತಿಮಾ ಮಂಗಳೂರು(ಜಿಲ್ಲಾ ಸಮಿತಿ ಸದಸ್ಯೆ ವಿಮ್) ಮನವಿ ಸಲ್ಲಿಸಿದರು.

- Advertisement -