ವಾಷಿಂಗ್ಟನ್: ನವೆಂಬರ್ ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಎದುರಾಳಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ತನ್ನೆಲ್ಲಾ ಶಕ್ತಿಯನ್ನು ಬಳಸುತ್ತೇನೆ ಎಂದಿದ್ದಾರೆ.
‘ಜೋ ಬೈಡನ್ ಅವರಿಂದ ಅನುಮೋದನೆ ಪಡೆದಿರುವುದು ಗೌರವದ ವಿಚಾರ. ಈ ಚುನಾವಣೆಯನ್ನು ಗೆಲ್ಲುವುದು ನನ್ನ ಗುರಿ’ ಎಂದು ಕಮಲಾ ಹೇಳಿದ್ದಾರೆ.