ಶಿಸ್ತು ಕ್ರಮ ಕೈಗೊಂಡರೆ ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ: ರೇಣುಕಾಚಾರ್ಯ

Prasthutha|

ಬೆಂಗಳೂರು: ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ನಾನು ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಪ್ರಚಾರ ಆರಂಭಿಸುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

- Advertisement -


ಶಿಸ್ತು ಸಮಿತಿಯಿಂದ ನೋಟಿ ನೀಡಿರುವ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ಕೆಲವರು ನನ್ನನ್ನ ಕರೆದು ಬೆನ್ನು ತಟ್ಟಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರೂಂನಲ್ಲಿ ಕರೆದು ಬೆನ್ನು ತಟ್ಟಿ, ಚೆನ್ನಾಗಿ ಮಾತನಾಡ್ತಿದ್ದೀಯಾ ರೇಣುಕಾಚಾರ್ಯ ಅಂದ್ರು. ಅವತ್ತು ಬೆನ್ನು ತಟ್ಟಿದ್ದು ಯಾರು ಅನ್ನೋದು ಬಹಿರಂಗಪಡಿಸಲ್ಲ ಎಂದರು.