ನವದೆಹಲಿ: ಹಿರಿಯ ಬಿಜೆಪಿ ನಾಯಕ ಮನೀಶ್ ಗ್ರೋವರ್ ಅವರನ್ನು ವಿರೋಧಿಸುವ ರೈತರ ಕಣ್ಣುಗಳನ್ನು ಕಿತ್ತು, ಕೈಗಳನ್ನು ಕತ್ತರಿಸುತ್ತೇನೆ ಎಂದು ಹರ್ಯಾಣದ ಬಿಜೆಪಿ ಸಂಸದ ಅರವಿಂದ್ ಶರ್ಮಾ ಶನಿವಾರ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದಾರೆ.
ಸಂಸದ ಅರವಿಂದ ಶರ್ಮಾ ಅವರ ರೈತರ ವಿರುದ್ಧ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರೈತರ ವಿರುದ್ಧ ಆಕ್ಷೇಪಾರ್ಹ ಪದಬಳಕೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಗ್ರೋವರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ರೈತರು ಮನೀಶ್ ಗ್ರೋವರ್ ಸತತ 6 ಗಂಟೆಗಳ ಕಾಲ ದಿಗ್ಬಂಧನದಲ್ಲಿರಿಸಿದ್ದರು.
ರೈತರ ನಡೆಯನ್ನು ಖಂಡಿಸಿ ಶನಿವಾರ ಬಿಜೆಪಿ ಆಯೋಜಿಸಿದ ಪ್ರತಿಭಟನೆ ವೇಳೆ ಮಾತನಾಡಿದ ಸಂಸದ ಅರವಿಂದ್ ಶರ್ಮಾ, ರೈತರ ವಿರುದ್ಧ ಉದ್ರೇಕಕಾರಿಯಾಗಿ ಮಾತನಾಡಿ ಬೆದರಿಕೆ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.