ಪ್ಯಾಲೆಸ್ತೀನಿಯರ ಪರ ಹೋರಾಡುತ್ತೇನೆ: ಅಮೆರಿಕ ಸಂಸದೆ

Prasthutha|

ನಾನು ಮೌನವಾಗಿರಲು ಸಾಧ್ಯವಿಲ್ಲ. ಪ್ಯಾಲೆಸ್ತೀನ್ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಅಮೆರಿಕ ಕಾಂಗ್ರೆಸ್ ನಲ್ಲಿ ಏಕೈಕ ಪ್ಯಾಲೆಸ್ತೀನಿ ಅಮೆರಿಕನ್ ಸದಸ್ಯೆಯಾಗಿರುವ ರಶೀದಾ ತೈಬ್ ಹೇಳಿದ್ದಾರೆ.

- Advertisement -


ತಮ್ಮ ವಿರುದ್ಧದ ವಾಗ್ದಂಡನೆ ನಿರ್ಣಯ ವಿರುದ್ಧ ಮಾತನಾಡಿದ ಅವರು, ಇಸ್ರೇಲ್- ಹಮಾಸ್ ಯುದ್ಧ ಬಗೆಗಿನ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಇದನ್ನು ಹೇಳಬೇಕು ಎನ್ನುವುದು ನನಗೇ ನಂಬಲಾಗುತ್ತಿಲ್ಲ ಆದರೆ ಪ್ಯಾಲೆಸ್ತೀನ್ ಜನರನ್ನು ಬಳಸಿ ಬಿಸಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Join Whatsapp