ಸನಾತನದ ವಿರುದ್ಧ ಇನ್ಮುಂದೆಯೂ ಮಾತನಾಡುತ್ತೇನೆ : ಉದಯನಿಧಿ ಸ್ಟಾಲಿನ್

Prasthutha|

►ಬಿಜೆಪಿ ಪಕ್ಷ ವಿಷಸರ್ಪ ಎಂದು ಟೀಕಿಸಿದ ತಮಿಳುನಾಡಿನ ಸಚಿವ

- Advertisement -

ತಮಿಳುನಾಡು : ಸನಾತನ ಧರ್ಮದ ಬಗ್ಗೆ ಇನ್ಮುಂದೆಯೂ ಮಾತನಾಡುತ್ತಲೇ ಇರುವುದಾಗಿ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.


ಕೆಲ ದಿನಗಳ ಹಿಂದೆ ಸನಾತನ ನಿರ್ಮೂಲನೆಯಾಗಬೇಕು ಎಂದು ಹೇಳಿದ್ದ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ದೊಡ್ಡ ವಿವಾದ ಆಗಿತ್ತು.
ಕಡಲೂರಿನಲ್ಲಿ ಮಾತನಾಡಿದ ಅವರು, ಕಳೆದ 100 ವರ್ಷಗಳಿಂದ ಸನಾತನ ಧರ್ಮದ ವಿರುದ್ಧ ತಮಿಳುನಾಡಿನಲ್ಲಿ ಧ್ವನಿಗಳು ಕೇಳಿಬರುತ್ತಿದ್ದು, ಮುಂದಿನ 200 ವರ್ಷಗಳ ಕಾಲ ನಾವದನ್ನು ಮುಂದುವರೆಸುವುದಾಗಿ ಅವರು ಹೇಳಿದರು. ‘ಸನಾತನ ಧರ್ಮದ ವಿರುದ್ಧ ಅಂಬೇಡ್ಕರ್, ಪೆರಿಯಾರ್, ಕರುಣಾನಿಧಿ ಹಲವು ಸಲ ಮಾತನಾಡಿದ್ದಾರೆ. ಸನಾತನ ಧರ್ಮಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಸತಿ ಪದ್ಧತಿಯಂಥ ಅನಿಷ್ಟ ಆಚರಣೆಗಳು ಅಂತ್ಯಗೊಂಡಿದೆ, ಮಹಿಳೆಯರು ಮನೆಯಿಂದ ಹೊರಬಂದಿದ್ದಾರೆ. ಇಂಥಾ ಅನಿಷ್ಟ ಆಚರಣೆಗಳನ್ನು ವಿರೋಧಿಸುವುದಕ್ಕೋಸ್ಕರನೇ ಡಿಎಂಕೆ ಹುಟ್ಟಿಕೊಂಡಿತ್ತು ಎಂದು ಅವರು ಹೇಳಿದರು.

- Advertisement -


ಸನಾತನದ ಬಗೆಗಿನ ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷವನ್ನು ವಿಷಸರ್ಪ ಎಂದು ಬಣ್ಣಿಸಿದ ಉದಯನಿಧಿ ಸ್ಟಾಲಿನ್, ತಮಿಳುನಾಡಿನಲ್ಲಿ ವಿಷಸರ್ಪಕ್ಕೆ ಆಶ್ರಯ ನೀಡಿರುವ ಎಐಎಡಿಎಂಕೆ ಪಕ್ಷ ಕಸದ ರಾಶಿ ಎಂದು ಅವರು ಟೀಕಿಸಿದ್ದಾರೆ. ಕಸದಲ್ಲಿ ಆಶ್ರಯ ಪಡೆದಿರುವ ವಿಷಸರ್ಪ ನಮ್ಮ ಮನೆಗಳಿಗೆ ನುಗ್ಗುತ್ತಿದೆ ಎಂದರು. ವಿಷಸರ್ಪವನ್ನು ಇಲ್ಲವಾಗಿಸಬೇಕೆಂದರೆ ಮೊದಲು ಕಸ ಇಲ್ಲದಂತೆ ನೋಡಿಕೊಳ್ಳಬೇಕು, ತಮಿಳುನಾಡಿನ ಜನರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಣ್ಣಾಡಿಎಂಕೆ ಪಕ್ಷವನ್ನು ಕಿತ್ತೊಗೆಯಬೇಕು, ವಿಧಾನಸಭಾ ಚುನಾವಣೆಯಲ್ಲಿ ಗುಲಾಮರನ್ನು ಕಿತ್ತುಹಾಕಿರುವ ಜನರು ಲೋಕಸಭಾ ಚುನಾವಣೆಯಲ್ಲಿ ಧಣಿಗಳನ್ನು ಓಡಿಸಬೇಕು ಎಂದು ಎಂದು ಅವರು ಕರೆ ಕೊಟ್ಟರು.

Join Whatsapp