ಇಸ್ರೇಲ್‌ನಿಂದ ಬೆದರಿಕೆ ಬಂದರೆ ಪರಮಾಣು ಕುರಿತ ನಮ್ಮ ನಿಲುವನ್ನು ಬದಲಿಸಿಕೊಳ್ಳುತ್ತೇವೆ: ಇರಾನ್

Prasthutha|

ಟೆಹ್ರಾನ್: ಇರಾನ್‌ನ ಅಸ್ತಿತ್ವಕ್ಕೆ ಇಸ್ರೇಲ್ ನಿಂದ ಬೆದರಿಕೆ ಇದೆ ಎಂಬ ಸ್ಥಿತಿ‌ ನಿರ್ಮಾಣವಾದರೆ ಪರಮಾಣು ಕುರಿತ ತನ್ನ ನಿಲುವನ್ನು ಇರಾನ್ ಬದಲಿಸಿಕೊಳ್ಳಲಿದೆ ಎಂದು ಇರಾನ್ ನ ಅತ್ಯುನ್ನತ ನಾಯಕ ಆಯತುಲ್ಲಾ ಅಲಿ ಖಾಮಿನೈಯವರ ಸಲಹೆಗಾರ ಕಮಲ್ ಖರ್ರಾಝಿ ಎಚ್ಚರಿಸಿದ್ದಾರೆ.

- Advertisement -

ನಾವು ಪರಮಾಣು ಬಾಂಬ್ ತಯಾರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ನಮ್ಮ ಅಸ್ತಿತ್ವಕ್ಕೇನಾದರೂ ಬೆದರಿಕೆ ಕಂಡು ಬಂದರೆ ನಮ್ಮ ಸೇನಾ ನಿಲುವನ್ನು ಮಾರ್ಪಡಿಸಿಕೊಳ್ಳದೆ ಬೇರೆ ಆಯ್ಕೆಯಿಲ್ಲ ಎಂದು ಖರ್ರಾಝಿ ಹೇಳಿದ್ದಾರೆ.

ಎಪ್ರಿಲ್ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ತನ್ನ ದೂತಾವಾಸದ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ನೇರವಾಗಿ ಇಸ್ರೇಲ್ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ಭಾರಿ ಪ್ರಮಾಣದ ಸ್ಫೋಟಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ದಾಳಿ ನಡೆಸಿದೆ.

- Advertisement -

ಇಸ್ರೇಲ್ ನೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಳ್ಳುತ್ತಿದ್ದು, ಈ ಹಿನ್ನೆಯಲ್ಲಿ ಇರಾನ್ ಪರವಾಗಿ ಖರ್ರಾಝಿ ಈ ಎಚ್ಚರಿಕೆ ನೀಡಿದ್ದಾರೆ.



Join Whatsapp