ಜ್ಞಾನವಾಪಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಮರ ಶಿರಚ್ಛೇದಕ್ಕೆ ಬಜರಂಗದಳ ಮುಖಂಡ ಕರೆ

Prasthutha|

ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಮರ ಶಿರಚ್ಛೇದ ನಡೆಸಿ ಹತ್ಯೆ ಮಾಡುವುದಾಗಿ ಬಜರಂಗದಳ ಮುಖಂಡನೊಬ್ಬ ಕರೆ ನೀಡಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

- Advertisement -

ಉತ್ತರ ಪ್ರದೇಶದ ಕಾನ್ಪುರ ನಿವಾಸಿ ಪಂಡಿತ್ ರವಿ ಸೋಂಕರ್ ಎಂಬಾತ ತನ್ನ ಫೇಸ್ ಬುಕ್ ಅಧಿಕೃತ ಪೇಜ್ ನಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದವನಾಗಿದ್ದಾನೆ.

ಮುಸ್ಲಿಮರು ವರ್ಷಗಳಿಂದ ತಮ್ಮ ಕೊಳಕು ಕೈ ಮತ್ತು ಕಾಲುಗಳನ್ನು ಸ್ವಚ್ಛಗೊಳಿಸಲು ಶಿವಲಿಂಗವನ್ನು ಬಳಸುತ್ತಿರುವುದು ದುಃಖಕರವಾಗಿದೆ. ನಾವು ಆ ತಲೆಗಳನ್ನು ಕಡಿಯುತ್ತೇವೆ ಎಂದು ರವಿ ಸೋಂಕರ್ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.



Join Whatsapp