ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು | ಸಮೀಪದಲ್ಲಿ ವಾಸವಿದ್ದವರ ಸ್ಥಳಾಂತರ

Prasthutha|

ಬೆಕ್‌ವರ್ಥ್‌: ಕಾಡ್ಗಿಚ್ಚು 200 ಚದರ ಮೈಲಿ ಆವಸಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ‌ ನಡೆದಿದೆ. ಅರಣ್ಯಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದವರನ್ನು ನೆವಾಡಾಗೆ ಸ್ಥಳಾಂತರ ಮಾಡಲಾಗಿದೆ. ಅಧಿಕ ಉಷ್ಣಾಂಶ ಮತ್ತು ಭಾರಿ ಗಾಳಿಯಿಂದ ಕಾಡ್ಗಿಚ್ಚು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಪ್ಲುಮಾಸ್‌ ರಾಷ್ಟ್ರೀಯ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಲು ಎರಡು ಸಿಡಿಲು ಕಾರಣವಾಗಿದೆ. ಅತ್ಯಂತ ಅನಾಹುತಕಾರಿಯಾಗಿ ಪರಿವರ್ತನೆಯಾಗಿರುವ ಕಾಡ್ಗಿಚ್ಚಿನಿಂದ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಗ್ನಿ ಮಾಹಿತಿ ಅಧಿಕಾರಿ ಲಿಸಾ ಕೊಕ್ಸ್‌ ತಿಳಿಸಿದ್ದಾರೆ.

ಗಾಳಿಯು ಗಂಟೆಗೆ 32 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಪ್ಲುಮಾಸ್‌ ರಾಷ್ಟ್ರೀಯ ಅರಣ್ಯದಿಂದ 200 ಚದರ ಮೈಲಿ ವ್ಯಾಪ್ತಿಯಲ್ಲಿರುವ ಎಲ್ಲರನ್ನು ಸ್ಥಳಾಂತರ ಮಾಡಲಾಗಿದೆ. ನೂರಾರು ಮನೆಗಳು ಹಾಗೂ ಕ್ಯಾಂಪ್‌ಗ್ರೌಂಡ್‌ಗಳು ಅಗ್ನಿಗೆ ಆಹುತಿಯಾಗುವ ಅಂಚಿನಲ್ಲಿವೆ ಎಂದು ತಿಳಿದು ಬಂದಿದೆ.

Join Whatsapp