ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು

Prasthutha|

ಮಂಗಳೂರು: ಕಡಬ ತಾಲೂಕಿನಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ.

- Advertisement -


ಐತೂರು ಭಾಗದ ಕೊಡೆಂಕೇರಿ, ಅಜನಾ ಎಂಬಲ್ಲಿ ಎರಡು ದೊಡ್ಡ ಆನೆಗಳೊಂದಿಗೆ ಒಂದು ಮರಿಯಾನೆ ಕಂಡುಬಂದಿದೆ.


ರಬ್ಬರ್ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳನ್ನು ನೋಡಿದ ಜನರು ಆತಂಕಕ್ಕೊಳಗಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.