ಪತ್ನಿಯ ಅಕ್ರಮ ಸಂಬಂಧ ಜಿಪಿಎಸ್’ನಿಂದ ಬಯಲು: ಪೊಲೀಸರಿಗೆ ಪತಿ ದೂರು

Prasthutha|

ಬೆಂಗಳೂರು: ಹೊಸದಾಗಿ ಖರೀದಿಸಿದ ಹುಂಡೈ ಐ20 ಕಾರಿನಿಂದ ಪತ್ನಿಯ ಅನೈತಿಕ ಸಂಬಂಧ ಬೆಳಕಿಗೆ ಬಂದಿದ್ದು ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಪ್ರಿಯಕರನ ಜೊತೆ ನೈಟ್ ಔಟ್ ಹೋಗಿದ್ದು, ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ನಿಂದ ಗೊತ್ತಾಗಿ ಪತಿ ದೂರು ದಾಖಲಿಸಿದ್ದಾರೆ.
ಕಳೆದ 2014 ರಲ್ಲಿ ಮದುವೆಯಾಗಿದ್ದ ನಿಖಿಲ್ ಅಂಗಡಿ ಹಾಗೂ ಪ್ರಿಯಾಂಕಾ ದಂಪತಿಗೆ 6 ವರ್ಷದ ಮಗು ಕೂಡ ಇದ್ದು, ಅದಾಗ್ಯೂ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಮಾಡಿರುವ ಪತಿ ಠಾಣೆ ಮೆಟ್ಟಿಲೇರಿದ್ದಾರೆ.
2020 ರಲ್ಲಿ ಪತಿ ನಿಖಿಲ್ ಅಂಗಡಿ ಎಂಬುವವರು ಹೊಸದಾಗಿ ಹುಂಡೈ ಐ 20 ಕಾರು ಖರೀದಿಸಿದ್ದರು. ಇದಕ್ಕೆ ಜಿಪಿಎಸ್ ಅಳವಡಿಕೆಯಾಗಿತ್ತು. ಹೀಗೆ ಒಂದು ದಿನ ಪತಿ ರಾತ್ರಿ ಪಾಳಿ ಕೆಲಸಕ್ಕೆ ಹೋದಾಗ ಪತ್ನಿಗೆ ಜಿಪಿಎಸ್ ಇರುವುದು ಗೊತ್ತಾಗದೆ ಕಾರು ತೆಗೆದುಕೊಂಡು ಹೋಗಿದ್ದಾರೆ.
ಬಿಇಎಲ್ ಸರ್ಕಲ್ ಬಳಿ ಇರುವ ಲಾಡ್ಜ್’ಗೆ ಬಂದಿದ್ದ ಕಾರು, ಅಲ್ಲಿದ್ದ ಖಾಸಗಿ ಹೊಟೇಲ್’ನ ಮುಂದೆ ಬೆಳಗಿನ ಜಾವ 5 ಗಂಟೆಯವರೆಗೂ ಕಾರು ಪಾರ್ಕ್ ಆಗಿತ್ತು. ಇದನ್ನು ಪತಿ ಜಿಪಿಎಸ್ ಮುಖಾಂತರ ಮೊಬೈಲ್’ನಲ್ಲಿ ತಿಳಿದುಕೊಂಡಿದ್ದಾರೆ.
ಬಳಿಕ ಅನುಮಾನಗೊಂಡು ಹೊಟೇಲ್’ನಲ್ಲಿ ವಿಚಾರಿಸಿದಾಗ ಪತ್ನಿಯ ಪ್ರಿಯಕರ ಹಾಗು ಪತ್ನಿ ಇಬ್ಬರು ಓಟರ್ ಐಡಿ ಒಂದೇ ರೂಂಗೆ ಬುಕ್ ಆಗಿತ್ತು. ಇದನ್ನ ಪ್ರಶ್ನಿಸಲು ಹೋದಾಗ ಪತ್ನಿ ಪ್ರಿಯಾಂಕ ಹಾಗೂ ಅಶೋಕ್ ಗುತ್ತೆದಾರ್ ಜೀವ ಬೆದರಿಕೆ ಹಾಕಿದ್ದಾರೆ. ನಂತರ ತನ್ನನ್ನು ಪತ್ನಿ ವಂಚಿಸಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



Join Whatsapp