ಕುಡಿದ ಮತ್ತಿನಲ್ಲಿ ಕತ್ತಿ ಬೀಸಿದ ಗಂಡನನ್ನು ಅದೇ ಕತ್ತಿಯಿಂದ ಹತ್ಯೆಗೈದ ಹೆಂಡತಿ!

Prasthutha|

ಕಾಸರಗೋಡು: ಕುಡಿದು ಬಂದು ಕತ್ತಿ ಬೀಸಿದ ಗಂಡನನ್ನು ಮಡದಿ ಅದೇ ಕತ್ತಿಯಿಂದ ಹತ್ಯೆಗೈದ ಘಟನೆ ಜಿಲ್ಲೆಯ ಪಾಣತ್ತೂರಿನಲ್ಲಿ ನಡೆದಿದೆ.

- Advertisement -

ಸಾವಿಗೀಡಾದ ಕುಡುಕ ಪತಿ‌‌ 54ರ ಬಾಬು. ಬಂಧಿತ ಸತಿಯನ್ನು ಸೀಮಂತಿನಿ ಎಂದು ಗುರುತಿಸಲಾಗಿದೆ. ನಿತ್ಯ ಕುಡಿದು ಬಂದು ಜಗಳ ಆಡುವುದು ಬಾಬು ಮರ್ಜಿ. ನಿನ್ನೆಯೂ ಅದನ್ನೇ ಮಾಡಿದ. ಅಲ್ಲಿಗೇ ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ. ಕತ್ತಿ ಎತ್ತಿ ಹೆಂಡತಿಗೆ ಬೀಸಿ ಗಾಯ ಮಾಡಿದ. ಸೀಮಂತಿನಿ ಅದೇ ಕತ್ತಿ ಕಿತ್ತುಕೊಂಡು ಗಂಡನಿಗೆ ಬೀಸಿದಳು. ಮತ್ತೆ ಬಾಬು ಏಳಲಿಲ್ಲ.

ಗಲಾಟೆ, ರಕ್ತ ನೋಡಿ ನೆರೆಹೊರೆಯವರು ರಾಜಾಪುರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೀಮಂತಿನಿಯನ್ನು ಬಂಧಿಸಿ ಗಾಯದ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಬು ಶವವನ್ನು ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.



Join Whatsapp