ಲಾಡ್ಜ್ ನಲ್ಲಿ ಹೆಂಡತಿ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಗಂಡ..!

Prasthutha|

ತುಮಕೂರು: ತನ್ನ ಹೆಂಡತಿಯ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಘಟನೆ ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್​ ನಲ್ಲಿ ನಡೆದಿದೆ.

- Advertisement -

ಮಧುಗಿರಿ ಮೂಲದ ಅನಿತಾ ಎಂಬ ಮಹಿಳೆ ಗಾಯಗೊಂಡಿದ್ದು, ಪತಿ ಬಾಬುನನ್ನು (34) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ಕು ವರ್ಷದ ಹಿಂದೆ ಬಾಬು ಅನಿತಾಳನ್ನು ಮದುವೆಯಾಗಿದ್ದ. ಬೆಳಗ್ಗೆ 6 ಗಂಟೆ ಹೊತ್ತಿಗೆ ಅಶೋಕ ಲಾಡ್ಜ್ ​ಗೆ ದಂಪತಿ ಬಂದಿತ್ತು. ಬಾಬು ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲ್ಲೇ ಲಾಡ್ಜ್ ​ಗೆ ಕರೆದುಕೊಂಡು ಬಂದಿದ್ದ ಎಂದು ತಿಳಿದುಬಂದಿದೆ.

- Advertisement -

ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp