ಕಂತು ಕಂತಿನ ನೋಟುಗಳು ಮಂಚದ ಮೇಲೆ ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಯಾಕಿಲ್ಲ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ದಾಖಲೆ ಸಮೇತ ಕಂತು ಕಂತಿನ ನೋಟುಗಳು ಮಂಚದ ಮೇಲೆ ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಯಾಕಿಲ್ಲ ಸಿಎಂ ಬೊಮ್ಮಾಯಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ. ದಾಖಲೆ ಸಮೇತ ಕಂತು ಕಂತಿನ ನೋಟುಗಳು ಮಂಚದ ಮೇಲೆ ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಯಾಕಿಲ್ಲ ಬೊಮ್ಮಾಯಿ ಅವ್ರೇ? ನಾ ಖಾನೇ ದೂಂಗಾವಾಲ ನರೇಂದ್ರ ಮೋದಿ ಅವ್ರೇ, ಶಾಸಕರ ಕಮಿಷನ್ ವ್ಯವಹಾರದಲ್ಲಿ ನಿಮ್ಮ ಮೌನದ ಪಾಲೆಷ್ಟು ಎಂದು ಹೇಳಿದ್ದಾರೆ.

40% ಭ್ರಷ್ಟಾಚಾರದ ಸಾಕ್ಷಿ ಸಿಕ್ಕರೂ ತಾಕತ್ತು, ಧಮ್ಮು,ಹಮ್ಮು,ಬಿಮ್ಮುಗಳು ಯಾವ ಬಿಲದಲ್ಲಿ ಅಡಗಿ ಕುಳಿತಿವೆ? ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿರುವ ಭ್ರಷ್ಟ ಬಿಜೆಪಿ ಸರ್ಕಾರ, ದೇಶದ ಎದುರು ರಾಜ್ಯದ ಮಾನ ಹರಾಜಿಗಿಟ್ಟಿದೆ. ವಾರಕ್ಕೆ ಎರಡು ಬಾರಿ ಚುನಾವಣಾ ಪ್ರವಾಸಿಗರಾದ ಮೋದಿ ಮತ್ತು ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ವಸೂಲಾಗಿರುವ payCm ಹಣದ ಪಾಲಿಗಾಗಿಯೇ ಎಂದು ಪ್ರಶ್ನಿಸಿದ್ದಾರೆ.

- Advertisement -

ರಾಜ್ಯದ ತೆರಿಗೆಯ ಬೊಕ್ಕಸವನ್ನು ಲೂಟಿ ಮಾಡಿ, ದೆಹಲಿ ಬಿಜೆಪಿಯ ಖಜಾನೆ ಭರ್ತಿ ಮಾಡಿದ ಪಾಪದ ಕೊಡ ತುಂಬಿದೆ. ನಾಚಿಕೆ,ಮಾನ,ಮಾರ್ಯಾದೆ ಸ್ವಾಭಿಮಾನ ಎನ್ನುವ ಪದಗಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ, ರಾಜ್ಯದ ಜನರಿಗೆ ಕ್ಷಮೆ ಕೇಳಿ,ಪಾಪದ ಪ್ರಾಯಶ್ಚಿತ್ತಕ್ಕೆ ರಾಜೀನಾಮೆ ಕೊಟ್ಟು ತೊಲಗಿ. ಘನತೆಯುತ ರಾಜ್ಯಕ್ಕೆ ಕಮಿಷನ್ ರಾಜ್ಯದ ಮಸಿ ಬಳಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುವುದು ನಿಶ್ಚಿತವಾಗಿದೆ ಎಂದು ಬರೆದುಕೊಂಡಿದ್ದಾರೆ.

Join Whatsapp