ಹುಡುಗಿಯರೇಕೆ ತಡ ರಾತ್ರಿ ಹೊರಗಿರಬೇಕು: ಮಾನಭಂಗಗೊಂಡ ಬಾಲಕಿಯ ತಂದೆಗೆ ಗೋವಾ ಸಿಎಂ ಪ್ರಶ್ನೆ

Prasthutha|

ಪಣಜಿ, ಜು.29; ಹದಿನಾಲ್ಕು ದಾಟಿದ ಹುಡುಗಿಯರೆಲ್ಲ ತಡ ರಾತ್ರಿ ಬೀಚ್ ನಲ್ಲಿ ಏಕೆ ಉಳಿಯಬೇಕು, ನಿಮ್ಮ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮಾನಭಂಗಕ್ಕೆಲ್ಲ ಪೊಲೀಸರನ್ನು, ಸರಕಾರವನ್ನು ಹೊಣೆ ಮಾಡಲಾಗದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.

- Advertisement -

ಮುಖ್ಯಮಂತ್ರಿಯ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೀಚ್ ನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಇದು ಗೋವಾವನ್ನು ಬೆಚ್ಚಿ ಬೀಳಿಸಿದೆ.
ಪ್ರತಿಪಕ್ಷಗಳು ಇದನ್ನು ಪ್ರಶ್ನಿಸಿದಾಗ ಮುಖ್ಯಮಂತ್ರಿಯ ಬಾಯಿಂದ ಹೆತ್ತವರನ್ನೇ ಆಕ್ಷೇಪಿಸಿ ಹೇಳಿಕೆ ಬಂದಿದೆ. ಇದರಿಂದ ಬಹಳಷ್ಟು ಹೆತ್ತವರು ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿ ಸಾವಂತ್ ಗೃಹ ಸಚಿವ ಖಾತೆಯನ್ನೂ ಹೊಂದಿದ್ದಾರೆ.



Join Whatsapp