ಏರ್ ಲೈನ್ ನ ದಿನವೊಂದರ ಜಾಹೀರಾತಿಗೆ 264 ಕೋಟಿ ರೂ. ಕೊಡುಗೆಯನ್ನು ತಿರಸ್ಕರಿಸಿದ ಹಾಲಿವುಡ್ ನಟ!

Prasthutha|

ನ್ಯೂಯಾರ್ಕ್: ವಿಮಾನಯಾನ ಜಾಹೀರಾತು ಪ್ರಚಾರವನ್ನು ಚಿತ್ರೀಕರಿಸಲು ಕೇವಲ ದಿನವೊಂದರ ಸಂಭಾವನೆಯಾದ 35 ಮಿಲಿಯನ್ ಡಾಲರ್ ಅಂದರೆ ಭಾರತೀಯ ಮೊತ್ತ ಸುಮಾರು 264 ಕೋಟಿ ರೂ. ಕೊಡುಗೆಯನ್ನು ನಟ, ನಿರ್ದೇಶಕ ಮತ್ತು ನಿರ್ಮಾಪಕ ಜಾರ್ಜ್ ಕ್ಲೂನಿ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

ವಿಮಾನಯಾನ ಸಂಸ್ಥೆಯ ಹೆಸರನ್ನು ಬಹಿರಂಗಪಡಿಸದ ಕ್ಲೂನಿ ಒಂದು ದಿನದ ಜಾಹೀರಾತಿಗೆ ಬಂದ ಭಾರೀ ಮೊತ್ತದ ಸಂಭಾವನೆಯನ್ನು ತಿರಸ್ಕರಿಸಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವತ್ತರ ಹರೆಯದ ನಾನು ರಾಜಕೀಯದಿಂದ ದೂರ ಉಳಿಯಲು ಬಯಸಿದ್ದು, ಪ್ರಸಕ್ತ ಈಗಲೂ ಬಾಸ್ಕೆಟ್ ಬಾಲ್ ಆಟವಾಡುತ್ತಿದ್ದೇನೆ ಮತ್ತು ಉತ್ತಮ ಜೀವನವನ್ನು ನಿರ್ವಹಿಸಲು ಬಯಸುತ್ತೇನೆ ಎಂದು ತಿಳಿಸಿದರು.

“ನಾನು ಆ ಜಾಹೀರಾತು ಒಂದನ್ನು ನಿರ್ವಹಿಸಿದರೆ 35 ಮಿಲಿಯನ್ ಡಾಲರ್ ಸಿಗುತ್ತಿತ್ತು. ನನ್ನ ಪತ್ನಿ ಅಮಲ್ ಳೊಂದಿಗೆ ನಾನು ಈ ಕುರಿತು ಸಮಾಲೋಚಿಸಿದೆ. ಕೊನೆಗೆ ನಾವಿಬ್ಬರು ಆ ಜಾಹೀರಾತಿನಿಂದ ಹಿಂದೆ ಸರಿಯುವುದಾಗಿ ತೀರ್ಮಾನಿಸಿದೆವು. ಆ ಜಾಹೀರಾತನ್ನು ಮಾಡಿ ನನ್ನ ನಿದ್ದೆ ಕಳೆದುಕೊಳ್ಳುವುದಕ್ಕಿಂತ 35 ಮಿಲಿಯನ್ ಡಾಲರ್ ಏನೇನೂ ಅಲ್ಲ ಎಂದು ಕ್ಲೂನಿ ತಿಳಿಸಿದ್ದಾರೆ.
ನೆಸ್ಟ್ರೆಸೊದ ಬ್ರಾಂಡ್ ಅಂಬಾಸಿಡರ್ ಆಗಲು ಆಸ್ಕರ್ ವಿಜೇತ ನಟ ಕ್ಲೂನಿಗೆ 40 ಮಿಲಿಯನ್ ಡಾಲರ್ ಪಾವತಿಸಿರುವುದು ಮತ್ತೊಂದು ಮೈಲಿಗಲ್ಲು.

- Advertisement -

ಸೆಲೆಬ್ರಿಟಿಗಳು ಜಾಹೀರಾತು ಮತ್ತು ಮಾರ್ಕೆಟಿಂಗ್ ಅಭಿಯಾನದ ಮೂಲಕ ತ್ವರಿತವಾಗಿ ಹಣವನ್ನು ಗಳಿಸುವ ಮಾರ್ಗವನ್ನು ಹುಡುಕುತ್ತಾರೆ. ಸಾಂಕ್ರಾಮಿಕ ರೋಗದ ನಂತರ ಚಲನಚಿತ್ರ, ದೂರದರ್ಶನ ಕಾರ್ಯಕ್ರಮ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ತಾರೆಯರು ಜಾಹೀರಾತಿನ ಮೇಲೆ ಗಮನ ಹರಿಸಿರುವುದು ವಾಸ್ತವ.



Join Whatsapp