ಬೆಂಗಳೂರು; ದೆಹಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿದ್ದ ನಾರಿ ಶಕ್ತಿ ಸ್ತಬ್ಧಚಿತ್ರ ಪ್ರದರ್ಶನಗೊಂಡಿದ್ದು, ಆದರೆ ಅದರಲ್ಲಿ ಕರ್ನಾಟಕ ಕನ್ನಡದಲ್ಲಿ ಬರೆಯದೇ ಹಿಂದಿಯಲ್ಲಿ ಬರೆದಿರುವುಕ್ಕೆ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಕರ್ನಾಟಕ ಎಂದು ಕನ್ನಡದಲ್ಲಿ ಬರೆಯದೆ ಹಿಂದಿಯಲ್ಲಿ ಬರೆದು ಗುಲಾಮಗಿರಿ ಪ್ರದರ್ಶನ ಮಾಡಿದ್ದು ಯಾಕೆ. ಮೊದಲು ಅದಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.
ಸ್ಥಬ್ದ ಚಿತ್ರವು ಕರ್ನಾಟಕದ ಮಹಿಳೆಯರ ಶೌರ್ಯ, ಕರ್ನಾಟಕದ ಹೆಮ್ಮೆಯ ರೇಷ್ಮೆ, ಪುಷ್ಪೋದ್ಯಮ, ಸಿರಿಧಾನ್ಯದ ನಾಯಕತ್ವ, ನಾರಿ ಶಕ್ತಿ ಎಂಬ ಐದು ವಿಷಯಗಳನ್ನು ಅಡಕಗೊಂಡಿತ್ತು. ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶಿಸುವ ಪ್ರತಿಕೃತಿಗಳನ್ನು ನಿರ್ಮಿಸಿರುವುದಾಗಿ ಇಲಾಖೆ ತಿಳಿಸಿತ್ತು.