ಮಸೀದಿಗಳಲ್ಲಿನ ಧ್ವನಿವರ್ಧಕ, ಹಲಾಲ್ ಮಾಂಸ ಯಾಕೆ ನಿಷೇಧಿಸಬೇಕು: ಉಮರ್ ಅಬ್ದುಲ್ಲಾ

Prasthutha|

ಶ್ರೀನಗರ: ಪ್ರಸಕ್ತ ಭಾರತದಲ್ಲಿ ಮಸೀದಿಗಳಲ್ಲಿನ ಧ್ವನಿವರ್ಧಕ, ಹಲಾಲ್ ಮಾಂಸ, ಹಿಜಾಬ್ ನಿಷೇಧ ಸೇರಿದಂತೆ ಮುಸ್ಲಿಮ್ ವಿರೋಧಿ ನಿಲುವನ್ನು ಯಾಕೆ ಮುನ್ನಲೆಗೆ ತರಲಾಗುತ್ತಿದೆ ಪ್ರಶ್ನಿಸಿದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಉಮರ್ ಅಬ್ದುಲ್ಲಾ, ಸರ್ಕಾರದ ಧೋರಣೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತಕ್ಕೆ ಸೇರಲು ನಿರ್ಧರಿಸಿದಾಗ ನಾವು ಪ್ರತಿ ಧರ್ಮವನ್ನು ಸಮಾನವಾಗಿ ಪರಿಗಣಿಸುವ ದೇಶಕ್ಕೆ ಸೇರಿಕೊಂಡಿದ್ದೇವೆ ಎಂದು ಅನಿಸುತ್ತಿತ್ತು. ಆದರೆ ಇದೀಗ ಒಂದು ಧರ್ಮಕ್ಕೆ ಆದ್ಯತೆ ನೀಡಲಾಗುತ್ತದೆ ಮತ್ತು ಇತರರನ್ನು ದಮನ ಮಾಡಲಾಗುತ್ತದೆ ಎಂದು ನಮಗೆ ಹೇಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಅದು ನಮಗೆ ತಿಳಿದಿದ್ದರೆ ಬಹುಶಃ ನಮ್ಮ ನಿರ್ಧಾರ ಬೇರೆಯೇ ಆಗುತ್ತಿತ್ತು. ಎಲ್ಲಾ ಧರ್ಮಕ್ಕೂ ಸಮಾನ ಹಕ್ಕು ಸಿಗುತ್ತದೆ ಎಂದು ಹೇಳಿದ ಮೇಲೆಯೇ ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದೆವು ಎಂದು ತಿಳಿಸಿದ್ದಾರೆ.

- Advertisement -

ಸದ್ಯ ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಆಝಾನ್ ಅಥವಾ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯಲ್ಲಿ ಧ್ವನಿವರ್ಧಕದ ಮೇಲೆ ನಡೆಯುತ್ತಿರುವ ವಿವಾದ, ತರಗತಿಯಲ್ಲಿ ಹಿಜಾಬ್ ಮತ್ತು ಹಲಾಲ್ ಮಾಂಸ ನಿಷೇಧದ ಕುರಿತು ಅವರು ಮಾತನಾಡಿದರು. ಇಲ್ಲಿ ಮುಸ್ಲಿಮರ ಧಾರ್ಮಿಕ ನಂಬಿಕೆ ಮತ್ತು ಅವರ ಜೀವನ ವಿಧಾನಕ್ಕಾಗಿ ದಮನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಯಾಕೆ ಬಳಸಬಾರದು? ಇತರ ಧಾರ್ಮಿಕ ಸ್ಥಳಗಳಲ್ಲಿ ಅದನ್ನು ಬಳಸಲು ಹಕ್ಕಿರುವಾಗ ಮಸೀದಿಗಳಲ್ಲಿ ಯಾಕೆ ಬಳಸಬಾರದು ಎಂದು ಒಮರ್ ಅಬ್ಬುಲ್ಲಾ ಪ್ರಶ್ನಿಸಿದ್ದಾರೆ.

ಕಳೆದ ಕೆಲವು ವಾರಗಳ ಹಿಂದೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್‌ನಂತಹ ರಾಜ್ಯಗಳು ರಾಮನವಮಿ ಶೋಭಾಯಾತ್ರೆಯ ವೇಳೆ ಘರ್ಷಣೆಯನ್ನು ಕಂಡಿವೆ. ಘೋಷವಾದ ಸಂಗೀತವನ್ನು ಮೊಳಗಿಸಿದ ಮೆರವಣಿಗೆಗಳು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹಾದುಹೋದಾಗ ಹಿಂಸಾಚಾರ ಭುಗಿಲೆದ್ದಿತು ಮತ್ತು ಕಲ್ಲುಗಳಿಂದ ದಾಳಿ ನಡೆಸಲಾಯಿತು.ಕರ್ನಾಟಕದಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯದಲ್ಲಿ ಬಲಪಂಥೀಯ ಹಿಂದೂ ಗುಂಪುಗಳು ಹಲಾಲ್ ಮಾಂಸದ ಮಾರಾಟವನ್ನು ವಿರೋಧಿಸಿದಾಗ ಮತ್ತೊಂದು ವಿವಾದವು ಭುಗಿಲೆದ್ದಿತು ಎಂದು ಅವರು ತಿಳಿಸಿದ್ದಾರೆ.

“ಹಲಾಲ್ ಮಾಂಸವನ್ನು ಮಾರಾಟ ಮಾಡಬೇಡಿ ಎಂದು ನೀವು ಯಾಕೆ ನಮಗೆ ಹೇಳುತ್ತೀರಿ. ನಮ್ಮ ಧರ್ಮವು ಹಲಾಲ್ ಮಾಂಸವನ್ನು ತಿನ್ನಲು ಸೂಚಿಸುತ್ತದೆ. ನೀವು ಅದನ್ನು ಏಕೆ ನಿಲ್ಲಿಸುತ್ತಿದ್ದೀರಿ? ನಾವು ನಿಮ್ಮನ್ನು ಹಲಾಲ್ ತಿನ್ನಲು ಒತ್ತಾಯಿಸುತ್ತಿಲ್ಲ. ಯಾವುದೇ ಮುಸಲ್ಮಾನರು ನಿಮ್ಮನ್ನು ಹಲಾಲ್ ತಿನ್ನಲು ಬಲವಂತಪಡಿಸಿದ್ದಾರೆಯೇ? ನೀವು ನಿಮ್ಮ ರೀತಿಯಲ್ಲಿ ತಿನ್ನಿರಿ. ನೀವು ನಿಮ್ಮ ತಿನ್ನಲು ಇಷ್ಟಪಡುತ್ತೀರಿ ಮತ್ತು ನಾವು ಇಷ್ಟಪಡುವ ರೀತಿಯಲ್ಲಿ ನಾವು ತಿನ್ನುತ್ತೇವೆ ಎಂದು ಅಬ್ದುಲ್ಲಾ ತಿಳಿಸಿದ್ದಾರೆ.



Join Whatsapp