ಪಬ್ ಜಿ ಆಟದಲ್ಲಿ ಮಗ್ನರಾಗಿದ್ದ ಅಣ್ಣ-ತಮ್ಮನ ಮೇಲೆ ರೈಲು ಹರಿದು ಸಾವು

Prasthutha|

ಜೈಪುರ: ರೈಲ್ವೆ ಹಳಿಯ ಮೇಲೆ ಕುಳಿತು ಮೊಬೈಲ್ ಫೋನ್ನಲ್ಲಿ ಪಬ್ಜಿ ಆಡುವುದರಲ್ಲಿ ಮಗ್ನರಾಗಿದ್ದ ಅಣ್ಣ-ತಮ್ಮನ ಮೇಲೆ ರೈಲು ಹರಿದು ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಲೋಕೇಶ್ ಮೀನಾ (22) ಮತ್ತು ಆತನ ಕಿರಿಯ ಸಹೋದರ ರಾಹುಲ್ (19) ಎಂಬವರೇ ಮೃತಪಟ್ಟವರಾಗಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಸಹೋದರರು ರೂಪಬಾಸ್ ಪಟ್ಟಣದ ರೈಲ್ವೆ ಹಳಿಯಲ್ಲಿ ಕುಳಿತು ಪಬ್ಜಿ ಆಡುತ್ತಿದ್ದರು.

ಗೇಮ್ ನಲ್ಲಿ ಮುಳುಗಿಹೋದ ಅವರಿಬ್ಬರೂ ರೈಲು ಬರುವುದನ್ನು ಗಮನಿಸಿಯೇ ಇಲ್ಲ. ಪರಿಣಾಮ ಇಬ್ಬರ ಮೇಲೆ ರೈಲು ಹರಿದಿದೆ ಎಂದು ಸದರ್ ಠಾಣೆಯ ಇನ್ಸ್ ಪೆಕ್ಟರ್ ನೋಹರ್ ಲಾಲ್ ತಿಳಿಸಿದ್ದಾರೆ.

- Advertisement -

ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Join Whatsapp