ವಿಶ್ವಕಪ್ ಕತಾರ್| ಉದ್ಘಾಟನೆ ವೇಳೆ ಮೋರ್ಗನ್ ಫ್ರೀಮನ್ ಜೊತೆಗೆ ಸಂಭಾಷಣೆ ನಡೆಸಿದ ಈ ‘ದೊಡ್ಡ ಮನುಷ್ಯ’ ಯಾರು?

Prasthutha|

ದೋಹಾ: ಇಡೀ ಜಗತ್ತು ಈಗ ಕತಾರ್‌ ನತ್ತ ಮುಖ ಮಾಡಿದ್ದು, ಒಂದು ತಿಂಗಳುಗಳ ಕಾಲ ಭೂಮಿಯೇ ಫುಟ್ಬಾಲ್ ಆಗಿ ಬದಲಾಗಲಿದೆ. ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಈ ವರ್ಷದ ವಿಶ್ವಕಪ್ ಪಂದ್ಯಾಟ ಪ್ರಾರಂಭಗೊಂಡಿತು.

- Advertisement -

ಉದ್ಘಾಟನಾ ಸಮಾರಂಭದಲ್ಲಿ ಕತಾರ್ ನ ಸಾಂಸ್ಕೃತಿಕ ಮೌಲ್ಯಗಳು, ಹೆಗ್ಗಳಿಕೆ ಮತ್ತು ಜನಪ್ರಿಯತೆಯ ಬಗ್ಗೆ ಮಾತನಾಡಿದ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.  ಮೋರ್ಗನ್ ಫ್ರೀಮನ್ ಜೊತೆಗೆ ಭಾಗವಹಿಸುವ ಮೂಲಕ ವಿಶ್ವಕಪ್‌ನ ರಾಯಭಾರಿಯೂ ಆದ ಖನಿಮ್ ಅಲ್ ಮುಫ್ತಾ ಕ್ಷಣ ಮಾತ್ರದಲ್ಲಿ ವಿಶ್ವದ ಗಮನ ಸೆಳೆದರು.

ಮುಫ್ತಾ ಅವರು ಬೆನ್ನುಮೂಳೆಯ ಬೆಳವಣಿಗೆಗೆ ಅಡ್ಡಿಯುಂಟು ಮಾಡುವ ಕಾಡಲ್ ರಿಗ್ರೆಷನ್ ಸಿಂಡ್ರೋಮ್ (Caudal Regression Syndrome)  ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಮುಫ್ತಾ ಅನಾರೋಗ್ಯದಿಂದ ಬಳಲುತ್ತಿದ್ದರೂ ಕುಗ್ಗದೆ ಪ್ರಪಂಚದ ಮುಂದೆ ತಲೆ ಎತ್ತಿ ಇಡೀ ಜಗತ್ತನ್ನು ವಿಶ್ವಕಪ್ ವೇದಿಕೆಗೆ ಆಹ್ವಾನಿಸಿದರು.

- Advertisement -

ಈ ಅಪರೂಪದ ಕಾಯಿಲೆಯಿಂದ ಮುಫ್ತಾ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಘೋಷಿಸಿದ್ದರು. ಆದರೆ ಮುಫ್ತಾ ಇನ್ನೂ ಅನೇಕರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಭವಿಷ್ಯದಲ್ಲಿ ಪ್ಯಾರಾಲಿಂಪಿಯನ್ ಆಗುವುದು ಮುಫ್ತಾ ಅವರ ದೊಡ್ಡ ಮಹತ್ವಾಕಾಂಕ್ಷೆಯಾಗಿದೆ. ಮುಫ್ತಾ ಅವರ ನೆಚ್ಚಿನ ಹವ್ಯಾಸ ಈಜು, ಸ್ಕೂಬಾ ಡೈವಿಂಗ್, ಫುಟ್‌ಬಾಲ್ ಮತ್ತು ಹೈಕಿಂಗ್ ಆಗಿದೆ.

ಗಲ್ಫ್ ಪ್ರದೇಶದ ಅತ್ಯುನ್ನತ ಶಿಖರವಾದ ಜಬಲ್ ಶಾಮ್ಸ್ ಅನ್ನು ಏರಿದ ಮುಫ್ತಾ ಇನ್ನೂ ಎವರೆಸ್ಟ್ ಅನ್ನು ಏರುವ ಗುರಿಯನ್ನು ಹೊಂದಿದ್ದಾರೆ.



Join Whatsapp