‘ಜಾಗತಿಕವಾಗಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ ಅರ್ಧದಷ್ಟು ಭಾರತದಲ್ಲಿವೆ’ : WHO

Prasthutha|

ಹೊಸದಿಲ್ಲಿ : ಕಳೆದ ವಾರ ಜಾಗತಿಕವಾಗಿ ವರದಿಯಾದ ಕೋವಿಡ್  ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ಭಾರತದಲ್ಲಿಯೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

- Advertisement -

ಭಾರತದಲ್ಲಿ ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಕುರಿತು ಬಿಡುಗಡೆಯಾದ ಡಬ್ಲ್ಯೂಹೆಚ್‌ಒ ಸಾಪ್ತಾಹಿಕ ಸಾಂಕ್ರಾಮಿಕ ರೋಗಶಾಸ್ತ್ರದ ವರದಿಯಲ್ಲಿ, ಕಳೆದ ವಾರದಲ್ಲಿ ವರದಿಯಾದ ಜಾಗತಿಕ ಪ್ರಕರಣಗಳಲ್ಲಿ ಭಾರತವು 46% ಮತ್ತು ಜಾಗತಿಕ ಸಾವುಗಳಲ್ಲಿ 25% ರಷ್ಟಿದೆ ಎಂದು ಹೇಳಿದೆ.

ಭಾರತದ ಕೊರೋನಾ ಹೆಚ್ಚಳದಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಮತ್ತು ಶವಾಗಾರಗಳು ತುಂಬಿ ತುಳುಕುತ್ತಿವೆ. ಹಾಸಿಗೆ ಅಥವಾ ಆಮ್ಲಜನಕಕ್ಕಾಗಿ ಕಾಯುತ್ತಿರುವ ಆಂಬ್ಯುಲೆನ್ಸ್ʼಗಳು ಮತ್ತು ಕಾರ್ ಪಾರ್ಕ್ʼಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು WHO ಹೇಳಿದೆ.

- Advertisement -

ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿದೆ.  ಧಾರ್ಮಿಕ ಆಚರಣೆಗಳು ಮತ್ತು ರಾಜಕೀಯ ರ‍್ಯಾಲಿಗಳು ಸೂಪರ್ ಸ್ಪ್ರೆಡ್ ಕಾರ್ಯಕ್ರಮಗಳನ್ನು ನಡೆಸಿದ ಬಿಜೆಪಿ ಸರಕಾರದ ವಿರುದ್ಧ ದೇಶ ವಿದೇಶಗಳಿಂದಲೂ ಟೀಕೆಗಳು ಕೇಳಿ ಬರುತ್ತಿವೆ.

Join Whatsapp