ಕೋಮುವಾದಿಗಳ ಬಳಿ ಬಸ್ ಓಡಿಸಿಕೊಂಡು ಹೋಗಿದ್ದವರು ಯಾರು?: ಝಮೀರ್ ವಿರುದ್ಧ ರೇವಣ್ಣ ಕಿಡಿ

Prasthutha|

ಹಾಸನ: ಕಾಂಗ್ರೆಸ್ ಪಕ್ಷಕ್ಕೆ ಈಗ ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿ ಬಂದಿದೆ. 60 ವರ್ಷ ಅವರಿಂದ ಓಟ್ ಹಾಕಿಸಿಕೊಂಡಿದ್ದೀರಿ, ಈಗ ಅವರ ಸೇವೆ ಮಾಡಿ. ಆದರೆ ಈ ಹಿಂದೆ ಕೋಮುವಾದಿಗಳ ಬಳಿ ಬಸ್ ಓಡಿಸಿಕೊಂಡು ಹೋಗಿದ್ದವರು ಯಾರು? ಎಂದು ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ಮಾಜಿ ರೇವಣ್ಣ ಕಿಡಿಕಾರಿದ್ದಾರೆ.

- Advertisement -


ಜಮೀರಣ್ಣ ನನ್ನ ಆತ್ಮೀಯ. ಅವರಿಗೆ ಇನ್ನೂ ನಾಲ್ಕು ಖಾತೆ ಕೊಡಲಿ. ಆದರೆ ಈ ಹಿಂದೆ ಇವರಿಗೆ ಕೋಮುವಾದಿಗಳ ಜೊತೆ ಹೋಗಬಾರದು ಅಂತಾ ಗೊತ್ತಿರಲಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ಅಲ್ಪಸಂಖ್ಯಾತರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೀಡಿರುವ ಕೊಡುಗೆ ಏನು ಎಂಬ ಜಮೀರ್ ಅಹಮದ್ ಪ್ರಶ್ನೆಗೆ ರೇವಣ್ಣ ತಿರುಗೇಟು ನೀಡಿದರು. ಆಗ ಕುಮಾರಣ್ಣಗೆ ನೀನು-ನಾನು ಜೋಡೆತ್ತು ಎಂದಿದ್ದರು, ಈಗ ಎಲ್ಲಿದಾರೆ? ಎಂದು ಜಮೀರ್ ರ ಬಗ್ಗೆ ರೇವಣ್ಣ ಕಟಕಿಯಾಡಿದರು.


ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಕಡೆಗಣನೆಯಾಗುತ್ತಿದೆ ಎಂದು ಕಿಡಿಕಾರಿರುವ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಹಾಸನ ಜಿಲ್ಲೆಯಲ್ಲಿ ಇವರ ಯೋಗ್ಯತೆಗೆ ಒಬ್ಬೇ ಒಬ್ಬ ಲಿಂಗಾಯತ ಅಭ್ಯರ್ಥಿ ಹಾಕಲಿಲ್ಲ. ಶಾಮನೂರು ಶಿವಶಂಕರಪ್ಪ ಇಷ್ಟೊತ್ತಿಗೆ ಬಿಜೆಪಿಗೆ ಹೋಗಿದ್ದಿದ್ದರೆ ಕೇಂದ್ರ ಸಚಿವರಾಗುತ್ತಿದ್ದರು ಎಂದು ರೇವಣ್ಣ ಹೇಳಿದ್ದಾರೆ.

Join Whatsapp