ನಾಶವಾದ ರಾಮ ಲಲ್ಲಾ ವಿಗ್ರಹ ಎಲ್ಲಿದೆ?: ದಿಗ್ವಿಜಯ್ ಸಿಂಗ್

Prasthutha|

►‘ವಿಗ್ರಹ ಬಾಲ ರಾಮನಂತೆ ಕಾಣುತ್ತಿಲ್ಲ’

- Advertisement -


ಭೋಪಾಲ್: ಅಯೋಧ್ಯೆ ರಾಮ ಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವು ಬಾಲ ರಾಮನ ಥರ ಕಾಣುತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ನಾನು ಮೊದಲಿನಿಂದಲೂ ಈ ಮಾತನ್ನು ಹೇಳುತ್ತಿದ್ದೇನೆ. ವಿವಾದಾತ್ಮಕವಾಗಿದ್ದ ಮತ್ತು ನಾಶವಾದ ರಾಮ್ ಲಲ್ಲಾ ವಿಗ್ರಹ ಎಲ್ಲಿದೆ? ಅದರ ಬದಲಿಗೆ ಎರಡನೇ ಪ್ರತಿಮೆಯ ಅಗತ್ಯವೇನಿತ್ತು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಜೀ ಮಹಾರಾಜ್ ಅವರು ರಾಮ ಜನ್ಮಭೂಮಿ ದೇವಾಲಯದಲ್ಲಿ ಭಗವಾನ್ ರಾಮನ ವಿಗ್ರಹವು ಮಗುವಿನ ರೂಪದಲ್ಲಿರಬೇಕು ಮತ್ತು ತಾಯಿ ಕೌಸಲ್ಯನ ಮಡಿಲಲ್ಲಿರಬೇಕು ಎಂದು ಸಲಹೆ ನೀಡಿದ್ದರು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ” ಎಂದು ಸಿಂಗ್ ಶುಕ್ರವಾರ ಎಕ್ಸ್ನಲ್ಲಿ ಬರೆದಿದ್ದಾರೆ.



Join Whatsapp