‘ನಳಿನ್ ತಾಯಿ ಖಾತೆಗೆ ಎಲ್ಲಿಂದ ಹಣ ಬಂತು?’: ಕಾಂಗ್ರೆಸ್ ಪ್ರಶ್ನೆ

Prasthutha|

ಬೆಂಗಳೂರುಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ತಾಯಿಯ ಬ್ಯಾಂಕ್‌ ಖಾತೆಗೆ ಸರ್ಕಾರದ ಯಾವ ಯೋಜನೆಯಡಿ 1 ಲಕ್ಷ ಜಮೆಯಾಗಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

- Advertisement -

ಕೆಪಿಸಿಸಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶನಿವಾರ ನಳಿನ್‌ ಭಾಷಣದ ವಿಡಿಯೊ ತುಣುಕು ಹಂಚಿಕೊಂಡು, ಸಂಸದರ ತಾಯಿಯ ಖಾತೆಗೆ ಕೇಂದ್ರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ? ಲಕ್ಷಗಟ್ಟಲೆ ಸಂಬಳ ಪಡೆಯುವವರ ತಾಯಿ ಫಲಾನುಭವಿ ಆಗಿದ್ದು ಹೇಗೆ? ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ? ಅಂತಹ ಯಾವ ಯೋಜನೆ ಇದೆ? ಎಂಬ ಮಾಹಿತಿಯನ್ನು ಸಂಸದರು ನೀಡಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳಿಂದ ಈಗ ಜನರ ಖಾತೆಗೆ ನೇರವಾಗಿ ಸರ್ಕಾರದ ಹಣ ಜಮೆಯಾಗುತ್ತಿದೆ. ನನ್ನ ಅಕೌಂಟ್‌ ಗೂ ಸರ್ಕಾರದಿಂದ ₹ 1 ಲಕ್ಷ ಬಂದಿದೆ ಎಂದು ಅಮ್ಮ ಮೊನ್ನೆ ಹೇಳಿದ್ದರು ಎಂದು ನಳಿನ್‌ ಕುಮಾರ್‌ ಕಟೀಲ್‌ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದ್ದರು.



Join Whatsapp