ನಾನು ಬರುವಾಗ ಎಲ್ಲಾ ಅಧಿಕಾರಿಗಳು ಎದ್ದು ನಿಂತು ಗೌರವ ಕೊಡಬೇಕು ಎಂದು ಬಿಜೆಪಿ ಶಾಸಕ!

Prasthutha|

ಲಕ್ನೋ: ನಾನು ಬರುವಾಗ ಎಲ್ಲಾ ಅಧಿಕಾರಿಗಳು ಎದ್ದು ನಿಂತು ಗೌರವ ಕೊಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಶಾಸಕ ಅನಿಲ್ ಸಿಂಗ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ವೀಡಿಯೋ ವೈರಲ್ ಆಗಿದ್ದು, ಅಧಿಕಾರ ದುರುಪಯೋಗ ಮಾಡುತ್ತಿರುವ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದೆ.

- Advertisement -

ಉತ್ತರಪ್ರದೇಶದ ಉನ್ನಾವೋದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಆಯೋಜಿಸಿದ್ದ ಜಿಲ್ಲಾ ಪಂಚಾಯಿತಿ ಸಭೆ ಈ ಘಟನೆ ನಡೆದಿದೆ.

ಇದರಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಸಿ.ಡಿ.ಒ.ಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ವಿಕಾಸ ಭವನದ ಸಭಾಂಗಣದಲ್ಲಿ ಸಭೆ ನಡೆದಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪ್ರಸ್ತಾವನೆ ಮತ್ತು ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿತ್ತು.

- Advertisement -

ಈ ಸಂದರ್ಭದಲ್ಲಿ ಸಭೆಗೆ ಪ್ರವೇಶಿಸಿದ ಅನಿಲ್ ಸಿಂಗ್, ನಾನು ಬಂಧಾಗ ಎಲ್ಲಾ ಅಧಿಕಾರಿಗಳು (ಗೌರವದಿಂದ) ಎದ್ದು ನಿಲ್ಲಬೇಕು. ಇದನ್ನು 100 ಬಾರಿ ಹೇಳಿದ್ದೇನೆ ಎಂದು ಎಚ್ಚರಿಸುವಾಗ ಕೆಲವು ಜನರು ಎದ್ದು ನಿಂತು ಗೌರವ ಸೂಚಿಸುವುದು ವೀಡಿಯೋದಲ್ಲಿದೆ.



Join Whatsapp